
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು 70ನೇ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಜನರು, ವಿವಿಧ ದೇಶಗಳ ಅಧ್ಯಕ್ಷರು, ನಾಯಕರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಅವರಂತೆಯೇ ನೀವು ಕೂಡಾ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಷಯ ಕೋರಬಹುದು. ಅದು ಹೇಗೆ ಗೊತ್ತಾ…? ಮುಂದೆ ಓದಿ….
ಮೋದಿ ಅವರಿಗೆ ಇಂದು (ಸೆಪ್ಟೆಂಬರ್ 17) 70 ವರ್ಷ ತುಂಬಿದೆ. ಇಂದು ಅವರದ್ದು 71ನೇ ಜನ್ಮದಿನ. ಎರಡನೇ ಬಾರಿ ಪ್ರಧಾನಿ ಮಂತ್ರಿ ಆಗಿರುವ ಅವರು ಆ ಮುಂಚೆ ಸತತ ನಾಲ್ಕು ಬಾರಿ ಗುಜರಾತ್ ಸಿಎಂ ಆಗಿ 2001ರಿಂದ 2014ರವರೆಗೆ ಆಡಳಿತ ಮಾಡಿದ ಅನುಭವ ಹೊಂದಿದ್ದರು. ಹಲವು ಟೀಕೆಗಳ ಮಧ್ಯೆಯೂ ಕಠಿಣ ನಿರ್ಧಾರಗಳನ್ನ ತೆಗೆದುಕೊಳ್ಳುವುದರಲ್ಲಿ ಮೀನಮೇಷ ಎಣಿಸದ ನರೇಂದ್ರ ಮೋದಿ ಈಗ ವಿಶ್ವದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲೊಬ್ಬರಾಗಿ ಬೆಳೆದಿದ್ದಾರೆ.
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಾಕಷ್ಟು ವಿಶ್ವ ನಾಯಕರು ಶುಭಾಷಯ ಕೋರಿದ್ದಾರೆ. ವಿಶೇಷ ಎಂದರೆ ನೀವು ಕೂಡ ಪ್ರಧಾನಿ ಮೋದಿಗೆ ಜನ್ಮದಿನದ ಶುಭಶಾಯ ಕೋರಬಹುದು.
ನರೇಂದ್ರ ಮೋದಿ ಅವರು ಜನರ ಜೊತೆ ಸಂಪರ್ಕದಲ್ಲಿರಲು ಟ್ವಿಟ್ಟರ್, ಫೇಸ್ಬುಕ್ ಸೇರಿ ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅಲ್ಲದೆ, ನಮೋ ಆ್ಯಪ್ ಕೂಡ ಇದರಲ್ಲಿ ಪ್ರಮುಖವಾಗಿದೆ. ನಮೋ ಆ್ಯಪ್ ಮೂಲಕ ನೀವು ನಿಮ್ಮ ಶುಭಾಶಯವನ್ನು ಪ್ರಧಾನಿ ಮೋದಿಗೆ ತಿಳಿಸಬಹುದಾಗಿದೆ.
So many people are wishing PM Shri @narendramodi on his birthday via NaMo App.
Download NaMo app and upload your wish in one click – https://t.co/f0ytXY07wP #HappyBdayNaMo pic.twitter.com/SdMLuzo4hv
— BJP (@BJP4India) September 17, 2020
ಪ್ಲೇಸ್ಟೋರ್ನಲ್ಲಿ ನಮೋ ಆ್ಯಪ್ ಲಭ್ಯವಿದೆ. ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಲಾಗಿನ್ ಆಗಬೇಕು. ಅಲ್ಲಿ, ನೀವು ಮೋದಿಗೆ ಶುಭಾಶಯ ಕೋರಬಹುದು.
कई लोग पीएम मोदी को उनके जन्मदिन पर NaMo App के जरिए शुभकामनाएं दे रहे हैं।
आप भी बन सकते हैं उनमें से एक।
NaMo app डाउनलोड करें – https://t.co/f0ytXY07wP
New India Wishes NaMo 'मॉड्यूल पर जाएं' और एक क्लिक में अपना वीडियो अपलोड करें। #HappyBdayNaMo pic.twitter.com/uGTPelBiA4
— BJP (@BJP4India) September 17, 2020
ಮೋದಿ ಜನ್ಮದಿನಕ್ಕೆ ರಷ್ಯಾ ಅಧ್ಯಕ್ಷ ವಿಶ್
ವಿಶ್ವದ ಬಹುತೇಕ ದೇಶದ ನಾಯಕರು ಮೋದಿ ಶುಭಾಶಯಗಳನ್ನು ಕೋರುತ್ತಿದ್ದಾರೆ. ಈ ಪೈಕಿ ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಭಾಶಯ ಕೋರಿದ್ದಾರೆ. ನರೇಂದ್ರ ಮೋದಿಗೆ ಜನ್ಮದಿನದ ಶುಭಾಶಯ ಕೋರಿ ಪತ್ರ ಬರೆದಿರುವ ಪುಟಿನ್, “ಪ್ರಧಾನ ಮಂತ್ರಿಯಾಗಿ ನೀವು ಮಾಡಿದ ಸಾಧನೆಯೂ ಅಂತಾರಾಷ್ಟ್ರೀಯ ಮಟ್ಟದ ಗೌರವಕ್ಕೆ ಅರ್ಹ. ನಿಮ್ಮ ನಾಯಕತ್ವದಲ್ಲಿ ಭಾರತ ಆರ್ಥಿಕ, ಸಾಮಾಜಿಕ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದೆ. ಭಾರತ ರಷ್ಯಾ ನಡುವಿನ ಶತಮಾನಗಳಷ್ಟು ಹಳೆಯದಾದ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಗೊಳಿಸಲು ಶ್ರಮಿಸಿದ ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅಭಿವೃದ್ಧಿ ಹಾಗೂ ಶಾಂತಿ ಸ್ಥಾಪನೆಗಾಗಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ವ್ಲಾಡಿಮಿರ್ ಪುಟಿನ್ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಆರೋಗ್ಯವಂತರಾಗಿ, ಸಂತೋಷದಿಂದ ದೀರ್ಘಕಾಲ ಬಾಳಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.
Comments are closed.