ರಾಷ್ಟ್ರೀಯ

ನವೆಂಬರ್ ನಲ್ಲಿ ಭಾರತಕ್ಕೆ ಕೊರೊನಾ ವ್ಯಾಕ್ಸಿನ್

Pinterest LinkedIn Tumblr


ನವದೆಹಲಿ: ನವೆಂಬರ್ ನಲ್ಲಿ ಕೊರೊನಾ ವೈರಸ್ ಲಸಿಕೆ ಭಾರತಕ್ಕೆ ಬರುವ ಸಾಧ್ಯತೆ ಇದೆ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪರಕರಣಗಳ ನಡುವೆಯೇ ಇದೊಂದು ಭಾರಿ ನೆಮ್ಮದಿ ನೀಡುವ ಸುದ್ದಿ ಎಂದೇ ಹೇಳಬಹುದು. ಔಷಧಿ ತಯಾರಿಕೆಯ ದಿಗ್ಗಜ ಭಾರತೀಯ ಕಂಪನಿಯಾಗಿರುವ ಡಾ. ರೆಡ್ಡಿಸ್ ಲ್ಯಾಬ್, ಭಾರತದಲ್ಲಿ ಕೊರೊನಾ ವ್ಯಾಕ್ಸಿನ್ ನ 10 ಕೋಟಿ ಲಸಿಕೆಗಳನ್ನು ಮಾರಾಟ ಮಾಡಲು ರಷ್ಯಾದ ನಿರ್ಮಾಪಕ ಕಂಪನಿ ರಶಿಯನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್ (RDIF) ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಲಸಿಕೆ ನವೆಂಬರ್ ವರೆಗೆ ಭಾರತಕ್ಕೆ ಬರುವ ನಿರೀಕ್ಷೆ ಇದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ BSE ಯಲ್ಲಿ ಡಾ. ರೆಡ್ಡಿಸ್ ಲ್ಯಾಬ್ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆ ಗಮನಿಸಲಾಗಿದೆ. ಕಪನಿಯ ಷೇರುಗಳ ಬೆಲೆಯಲ್ಲಿ ಶೇ.4.36 ರಷ್ಟು ಏರಿಕೆಯೊಂದಿಗೆ 4637 ರೂ.ಗಳ ಮೇಲೆ ಮುಕ್ತಾಯ ಕಂಡಿದೆ.

ರಷ್ಯಾದ ಕೊರೊನಾ ವೈರಸ್ ಲಸಿಕೆಯನ್ನು ಭಾರತದಲ್ಲಿ ಮಾರಾಟ ಮಾಡಲು ಡಾ.ರೆಡ್ಡಿಸ್ ಲ್ಯಾಬ್ ಜೊತೆ ಡೀಲ್ ಪೂರ್ಣಗೊಂಡಿದೆ. ಇದಕ್ಕಾಗಿ ಭಾರತದ ವತಿಯಿಂದ ಎಲ್ಲ ರೆಗ್ಯುಲೇಟರಿ ಅನುಮತಿಗಳು ಸಿಕ್ಕಿವೆ. ರಷ್ಯಾ ಈ ವ್ಯಾಕ್ಸಿನ್ ಬಿ ‘ಸ್ಪುಟ್ನಿಕ್ ವಿ’ ಎಂದು ನಾಮಕರಣ ಮಾಡಿದೆ. ರಶಿಯನ್ ಭಾಷೆಯಲ್ಲಿ ಸ್ಪುಟ್ನಿಕ್ ಅರ್ಥ ಸ್ಯಾಟಲೈಟ್. ರಷ್ಯಾ ವಿಶ್ವದಲ್ಲಿಯೇ ಮೊಟ್ಟಮೊದಲ ಸ್ಯಾಟಲೈಟ್ ಅಭಿವೃದ್ಧಿಪಡಿಸಿ ಅದಕ್ಕೆ ಸ್ಪುಟ್ನಿಕ್ ಎಂಬ ಹೆಸರನ್ನಿಟ್ಟಿತ್ತು.

ಈ ಕುರಿತು ಹೇಳಿಕೆ ಬಿಡುಗಡೆಮಾಡಿರುವ ರಷ್ಯಾ, RDIF ರಶಿಯಾದ ಸ್ಪುಟ್ನಿಕ್ V ವ್ಯಾಕಿನ್ ನ ಭಾರತದಲ್ಲಿನ ಕ್ಲಿನಿಕಲ್ ಟ್ರಯಲ್ ಹಾಗೂ ಮಾರಾಟಕ್ಕಾಗಿ ಡಾ.ರೆಡ್ಡಿಸ್ ಲ್ಯಾಬೊರೇಟರೀಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಪ್ರಕಾರ ರಷ್ಯಾದ ಕಂಪನಿ ಭಾರತದಲ್ಲಿ ಡಾ. ರೆಡ್ಡಿಸ್ ಲ್ಯಾಬ್ ಬಿ 10 ಕೋಟಿ ಲಸಿಕೆಗಳ ಪೂರೈಕೆ ಮಾಡಲಿದೆ. ಈ ಕುರಿತು ಹೇಳಿಕೆ ನೀಡಿರುವ RDIF ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿರಿಲ್ ದಿಮಿಟ್ರಿವ್, ಒಂದು ವೇಳೆ ಟ್ರಯಲ್ ಯಶಸ್ವಿಯಾದರೆ ನವೆಂಬರ್ ವರೆಗೆ ಭಾರತದಲ್ಲಿ ಈ ಲಸಿಕೆ ಲಭ್ಯವಾಗಲಿದೆ ಎಂದಿದ್ದಾರೆ.

ಹ್ಯೂಮನ್ ಎಡಿನೋವೈರಸ್ ಡ್ಯೂಲ್ ವೆಕ್ತರ್ ಪ್ಲಾಟ್ಫಾರ್ಮ್ ಮೇಲೆ ಆಧಾರಿತ ರಷ್ಯಾದ ಈ ಲಸಿಕೆ ಭಾರತದಲ್ಲಿ ಕೊವಿಡ್ 19 ವೈರಸ್ ವಿರುದ್ಧ ಸುರಕ್ಷಿತ ಹೋರಾಟ ನಡೆಸುವಲ್ಲಿ ಯಶಸ್ವಿಯಾಗಲಿದೆ ಎಂದು ರಷ್ಯಾ ಹೇಳಿದೆ. ಕಳೆದ ಒಂದು ದಶಕದಲ್ಲಿ ರಷ್ಯಾ ಈ ಪ್ಲಾಟ್ ಫಾರಂ ನ ಸುಮಾರು 250 ಕ್ಲಿನಿಕಲ್ ಟ್ರಯಲ್ ನಡೆಸಿದ್ದು, ಇದರಿಂದ ಯಾವುದೇ ರೀತಿಯ ಅಥವಾ ಸಂಭವನೀಯ ನಕಾರಾತ್ಮಕ ಪರಿಣಾಮಗಳನ್ನು ಗಮನಿಸಲಾಗಿಲ್ಲ ಎಂದಿದ್ದಾರೆ.

Comments are closed.