ರಾಷ್ಟ್ರೀಯ

ರಾಜಸ್ಥಾನ: ಭೀಕರ ದೋಣಿ ದುರಂತದಲ್ಲಿ 15ಕ್ಕೂ ಹೆಚ್ಚು ಮಂದಿ ಸಾವು!

Pinterest LinkedIn Tumblr


ಬುಂಡಿ: ರಾಜಸ್ಥಾನದಲ್ಲಿ ಭೀಕರ ದೋಣಿ ದುರಂತದಲ್ಲಿ 40ಕ್ಕೂ ಹೆಚ್ಚು ಜನರಿದ್ದ ದೋಣಿ ಮುಳುಗಿದ್ದು 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ಬುಂಡಿ ಜಿಲ್ಲೆಯ ಕಮಲೇಶ್ವರ ಮಹಾದೇವ ದರ್ಶನಕ್ಕೆ ಕೋಟಾದ ಚಂಬಲ್​​​ ನದಿಯಲ್ಲಿ ತೆರಳುತ್ತಿದ್ದು ವೇಳೆ. ಬುಧವಾರ ಬೆಳಿಗ್ಗೆ ಸುಮಾರು .8.45 ರ ಸಮಯದಲ್ಲಿ ಈ ದುರ್ಘಟನೆ ಸಂಬವಿಸಿದೆ ಎಂದು ತಿಳಿದುಬಂದಿದೆ.

ಕಮಲೇಶ್ವರ ಮಹಾದೇವ ದೇವಸ್ಥಾನಕ್ಕೆ 40ಕ್ಕೂ ಹೆಚ್ಚು ಮಂದಿ ಭಕ್ತರು ಪ್ರಯಾಣಿಕ ದೋಣಿ ದೋಣಿಯಲ್ಲಿ ಹೋಗ್ತಿದ್ದರು. ಅಲ್ಲದೆ ಈ ದೋಣಿಯಲ್ಲಿ ಕೆಲವರು ಮೋಟಾರ್ ಸೈಕಲ್‌ಗಳನ್ನು ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಭಾರ ಹೆಚ್ಚಾದ್ದರಿಂದ ನೀರಿನ ಸೆಳೆತಕ್ಕೆ ದೋಣಿ ಉರುಳಿದೆ.

ಈಜಲಾರದೆ ಸುಮಾರು 15 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಈಜಿ ದಡ ಸೇರಿದರೆ ಮತ್ತೆ ಕೆಲವರು ದಡ ತಲುಪಲು ಹರಸಾಹಸ ಪಟ್ಟಿದ್ದಾರೆ.

ದೋಣಿ ಮುಳುಗಡೆ ವೇಳೆ ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ಪಡೆಗಳು ಸೇರಿದಂತೆ ಅಗ್ನಿಶಾಮಕ ಹಾಗು ಸ್ಥಳೀಯ ಈಜುಗಾರರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

Comments are closed.