ರಾಷ್ಟ್ರೀಯ

ಆತ ಮತ್ತೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಎಂದು 12ರ ಬಾಲಕಿ ಸೂಸೈಡ್..!

Pinterest LinkedIn Tumblr


ಹೊಸದಿಲ್ಲಿ: 12 ವರ್ಷದ ಅಪ್ರಾಪ್ತೆಯೊಬ್ಬಳು ತನ್ನ ಪ್ರೀತಿ ವಿಫಲವಾಯಿತೆಂದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಇದು ಹರ್ಯಾಣದ ಫರೀದಾಬಾದ್‌ನಲ್ಲಿ ನಡೆದ ಘಟನೆ. ಆಕೆಗಿನ್ನೂ ಬದುಕಿನ ನಿಜ ಅರ್ಥ ತಿಳಿದೇ ಇಲ್ಲ. ಇನ್ನೂ ತಂದೆತಾಯಿಯ ಮಡಿಲಲ್ಲೇ ಮಲಗುವ ಆ ಪುಟ್ಟ ಹುಡುಗಿ ಹೈಸ್ಕೂಲ್‌ ಮೆಟ್ಟಿಲು ಕೂಡ ಹತ್ತಿಲ್ಲ. ಅದಾಗಲೇ 12 ವರ್ಷದ ಆ ಬಾಲಕಿಗೆ ಮನೆ ಪಕ್ಕದ ಅಪ್ರಾಪ್ತ ಬಾಲಕನೊಂದಿಗೆ ಕ್ರಷ್ ಆಗಿದೆ. ಆದರೆ ಆತ ಬೇರೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದನಂತೆ.

ತನಗೆ ಪ್ರೀತಿಯುಂಟಾದ ಬಾಲಕ ಮತ್ತೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ ಅಂದಿದ್ದು ತಿಳಿದಿದ್ದೇ ತಡ ಆ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ. ಸಾವಿಗೂ ಮುನ್ನ ಪತ್ರವೊಂದನ್ನು ಬರೆದಿರುವ ಮೃತ ಬಾಲಕಿ, ಅದರಲ್ಲಿ ತನ್ನ ಸಾವಿಗೆ ಕಾರಣವನ್ನು ಉಲ್ಲೇಖಿಸಿದ್ದಾಳೆ. ‘ನಾನು ನನ್ನದೇ ವಯಸ್ಸಿನ ಪಕ್ಕದ ಮನೆಯ ಹುಡುಗನನ್ನು ಪ್ರೀತಿಸುತ್ತಿದ್ದೆ. ಆದರೆ ಆತ ಬೇರೊಂದು ಹುಡಗಿಯನ್ನು ಪ್ರೀತಿಸುತ್ತಿದ್ದ. ಈ ನೋವಿನಿಂದ ಹೊರಬರಲಾದೆ ನಾನು ಆತ್ಮಹತ್ಯೆಯ ನಿರ್ಧಾರ ಕೈಗೊಳ್ಳುತ್ತಿದ್ದೇನೆ’ ಎಂದು ಬರೆದಿದ್ದಾಳೆ.

ಮೃತ ಬಾಲಕಿಯ ತಂದೆಗೆ ಸಿಕ್ಕಿದ ಪತ್ರದಿಂದ ಸಾವಿನ ಕಾರಣ ಬಯಲಾಗಿದ್ದು, ಸದ್ಯ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Comments are closed.