ರಾಷ್ಟ್ರೀಯ

ಪ್ಲಾಸ್ಮಾ ಥೆರಪಿ ಕೊರೋನಾ ರೋಗಿಗಳಿಗೆ ಸಹಾಯವಾಗುವುದಿಲ್ಲ: ಐಸಿಎಂಆರ್

Pinterest LinkedIn Tumblr


ನವದೆಹಲಿ: ಕೊರೋನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿಯಿಂದ ಸಾವಿನ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ, ಅಲ್ಲದೆ ರೋಗ ನಿಯಂತ್ರಣಕ್ಕೂ ಕೂಡ ಉಪಯೋಗವಾಗುವುದಿಲ್ಲವೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.

ಪ್ಲಾಸ್ಮಾ ಥೆರಪಿಯ ಪ್ರಯೋಜನಗಳ ಬಗ್ಗೆ ಐಸಿಎಂಆರ್ ಪ್ರಯೋಗವನ್ನು ನಡೆಸಿದ್ದು, ಅದಕ್ಕೆ ಪ್ಲಾಸಿಡ್ ಎಂದು ಹೆಸರು. ಭಾರತೀಯ ವೈದ್ಯಕೀಯ ಮಂಡಳಿ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 39 ಆಸ್ಪತ್ರೆಗಳಲ್ಲಿ ನಡೆಸಿದೆ.

ಕೊರೋನಾದಿಂದ ಸಾಧಾರಣವಾಗಿ ಮಧ್ಯಮ ಪ್ರಮಾಣದ ಸೋಂಕಿನಿಂದ ಬಳಲುತ್ತಿರುವ 464 ರೋಗಿಗಳ ಮೇಲೆ ಅಧ್ಯಯನ ನಡೆಸಲಾಗಿದ್ದು ಅವರಲ್ಲಿ 235 ಮಂದಿಗೆ ಚೇತರಿಸಿಕೊಳ್ಳುವ ಪ್ಲಾಸ್ಮಾ(ಸಿಪಿ0 convalescent plasma)ವನ್ನು ಗುಣಮುಖರಾಗಿರುವ ಕೊರೋನಾ ರೋಗಿಗಳಿಂದ ನೀಡಲಾಗಿದೆ.

ಉಳಿದ 229 ಮಂದಿಗೆ ಸಾಧಾರಣ ಆರೈಕೆ ನೀಡಲಾಗಿದೆ. ಮಧ್ಯದ ಗುಂಪಿನ ರೋಗಿಗಳಿಗೆ 24 ಗಂಟೆಗಳಲ್ಲಿ 200 ಎಂಎಲ್ ಪ್ಲಾಸ್ಮಾ ನೀಡಲಾಗಿದೆ. ಅಧ್ಯಯನದಲ್ಲಿ 34 ರೋಗಿಗಳು ಅಥವಾ ಶೇಕಡಾ 13.6 ಮಂದಿ ರೋಗಿಗಳು ಪ್ಲಾಸ್ಮಾ ಥೆರಪಿ ಪಡೆದುಕೊಂಡವರು ಮೃತಪಟ್ಟಿದ್ದಾರೆ. 31 ರೋಗಿಗಳು ಅಥವಾ ಶೇಕಡಾ 14.6ರಷ್ಟು ಮಂದಿ ಪ್ಲಾಸ್ಮಾ ಥೆರಪಿಗೆ ಒಳಗಾಗದವರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೋನಾ ರೋಗಿಗಳಿಗಾಗಿ ರಾಜ್ಯ ಸರ್ಕಾರಗಳು ಪ್ಲಾಸ್ಮಾ ಥೆರಪಿ ಬ್ಯಾಂಕ್ ಗಳನ್ನು ನಿರ್ಮಿಸುತ್ತಿರುವಾಗ ಐಸಿಎಂಆರ್ ಈ ವರದಿ ನೀಡಿರುವುದು ಮಹತ್ವ ಪಡೆದಿದೆ.

Comments are closed.