
ವಿಜಯವಾಡ: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಭೀಕರ ರಸ್ತೆ ಅಪಘಾತದಲ್ಲಿ ಸ್ವಲ್ಪದರಲ್ಲೇ ಬಚಾವ್ ಆಗಿರುವ ಘಟನೆ ಶನಿವಾರ ನಡೆದಿದೆ.
ನಾಯ್ಡು ಅವರು ವಿಜಯವಾಡದಿಂದ ಹೈದರಾಬಾದ್ಗೆ ತೆರಳುವಾಗ ಘಟನೆ ನಡೆದಿದೆ. ಮಾರ್ಗ ಮಧ್ಯೆ ಬಿಡಾಡಿ ದನವೊಂದು ದಿಢೀರನೆ ರಸ್ತೆಗೆ ಅಡ್ಡಲಾಗಿ ಬಂದಿದ್ದರಿಂದ ದನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಎಸ್ಕಾರ್ಟ್ ವಾಹನದ ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾರೆ.
ಈ ವೇಳೆ ಹಿಂಬದಿಯಿದ್ದ ಬೆಂಗಾವಲು ವಾಹನ ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಕಾರಿನ ಬಾನೆಟ್ ಸಂಪೂರ್ಣ ಜಖಂಗೊಂಡಿರುವುದನ್ನು ಮೇಲಿನ ಚಿತ್ರದಲ್ಲಿ ಕಾಣಬಹುದಾಗಿದೆ.
ಅದೃಷ್ಟವಶಾತ್ ನಾಯ್ಡು ಅವರು ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Comments are closed.