
ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಜವಹರ್‌ಲಾಲ್ ನೆಹರೂ ಅವರ ಪ್ರತಿಮೆಗೆ ಶಿರಬಾಗಿ ಕೈ ಮುಗಿಯುವ ಫೋಟೋ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು.
ಕಾಂಗ್ರೆಸ್ ಬೆಂಬಲಿಗರು ತಮ್ಮ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಈ ಪೋಸ್ಟ್ ಹಾಕಿಕೊಂಡು ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ವಿರುದ್ಧ ಕಾಮೆಂಟ್‌ಗಳನ್ನು ಹಾಕುತ್ತಿದ್ದರು. ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆಹರೂ ಅವರ ಶ್ರೇಷ್ಠತೆ ಅರಿವಿಗೆ ಬಂತು ಎಂದು ಕುಟುಕುತ್ತಿದ್ದರು.
ಹಾಗಾದ್ರೆ ಸತ್ಯಾಂಶವೇನು..?
ಹಾಗೆ ನೋಡಿದ್ರೆ ಇದು ತಿರುಚಿದ ಫೋಟೋ. ಮಹಾತ್ಮಾ ಗಾಂಧಿ ಅವರ ಪ್ರತಿಮೆ ಇರುವ ಸ್ಥಳದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ನೆಹರೂ ಅವರ ಪ್ರತಿಮೆ ಇರುವಂತೆ ಚಿತ್ರಿಸಲಾಗಿದೆ.
ಪತ್ತೆ ಮಾಡಿದ್ದು ಹೇಗೆ..?
ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸಿದಾಗ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟ್ಟರ್ ಪೇಜ್ ಲಭ್ಯವಾಯ್ತು.
ಆಗಸ್ಟ್ 2020ರಲ್ಲಿ ಪ್ರಧಾನಿ ಮೋದಿ ಅವರು ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟಿಸಿದ ವೇಳೆ ತೆಗೆದ ಫೋಟೋ ಇದಾಗಿತ್ತು.
ನೂತನವಾಗಿ ಉದ್ಘಾಟನೆಗೊಂಡ ರಾಷ್ಟ್ರೀಯ ಸ್ವಚ್ಛತಾ ಕೇಂದ್ರದ ಕೆಲವು ಸ್ಮರಣೀಯ ದೃಶ್ಯಗಳು ಎಂದು ಬರೆದು ಪ್ರಧಾನಿ ಮೋದಿ ಅವರ ಪರಿಶೀಲಿಸಿದ ಟ್ವಿಟ್ಟರ್ ಖಾತೆಯಿಂದ ಈ ಫೋಟೋ ಶೇರ್ ಮಾಡಲಾಗಿತ್ತು. ಈ ಫೋಟೋಗಳ ಪೈಕಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ಪ್ರಧಾನಿ ಮೋದಿ ಕೈಮುಗಿಯುವ ಫೋಟೋ ಆಕರ್ಷಕವಾಗಿತ್ತು.
ಟೈಮ್ಸ್ ಫ್ಯಾಕ್ಟ್ ಚೆಕ್‌ನ ಸಮಗ್ರ ಅಧ್ಯಯನದ ಬಳಿಕ ಹೇಳೋದಾದ್ರೆ, ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಪ್ರಧಾನಿ ಮೋದಿ ತಲೆಬಾಗಿ ವಂದಿಸುವ ಫೋಟೋವನ್ನು ಕಿಡಿಗೇಡಿಗಳು ತಿರುಚಿದ್ದಾರೆ. ಮಾಜಿ ಪ್ರಧಾನಿ ನೆಹರೂ ಅವರಿಗೆ ವಂದಿಸುವ ರೀತಿ ಡಿಜಿಟಲ್ ತಂತ್ರಜ್ಞಾನ ಬಳಸಿ ಫೋಟೋದಲ್ಲಿ ಬದಲಾವಣೆ ಮಾಡಿದ್ದಾರೆ.
Comments are closed.