ಚಂಡೀಗಢ: ಹರಿಯಾಣದ ಡಬವಾಲಿಯ ಗೋದಿಕಾ ಗ್ರಾಮದಲ್ಲಿ ಯುವಕ ಮತ್ತು ಮಹಿಳೆ ಒಂದೇ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಜೋಡಿ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು.
23 ವರ್ಷದ ಸಂದೀಪ್ ಕುಮಾರ್ ಮತ್ತು 43 ವರ್ಷದ ಮಹಿಳೆ ಆತ್ಮಹತ್ಯೆ ಶರಣಾಗಿದ್ದಾರೆ. ಮಹಿಳೆ ಪಂಜಾಬ್ ಮೂಲದರಾಗಿದ್ದು, ಯುವಕ ಗೋದಿಕಾ ಗ್ರಾಮದ ನಿವಾಸಿಯಾಗಿದ್ದನು. ಯುವಕ ಸಂದೀಪ್ ನಿಗೆ ನಾಲ್ಕು ಮಕ್ಕಳ ತಾಯಿ ಮೇಲೆ ಪ್ರೇಮಾಂಕುರವಾಗಿತ್ತು. ನಂತರ ಇಬ್ಬರು ಪರಸ್ಪರ ಪ್ಪಿಗೆ ಮೇರೆಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಯುವಕನ ಕುಟುಂಬಸ್ಥರು ಇಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿರಲಿಲ್ಲ.
ಮಂಗಳವಾರ ಕೋಣೆ ಸೇರಿದ ಜೋಡಿ ಒಂದೇ ಹಗ್ಗದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಕ ಪಕ್ಷವೊಂದರ ಕಾರ್ಯಕರ್ತನಾಗಿದ್ದು, ದಿನಗೂಲಿ ಕೆಲಸ ಮಾಡಿಕೊಂಡಿದ್ದನು. ಮಂಗಳವಾರ ರಾತ್ರಿ ಇಬ್ಬರು ನೇಣಿಗೆ ಶರಣಾಗಿದ್ದಾರೆ. ತಾಯಿ ಹೊರಗಡೆಯಿಂದ ಮಗನನ್ನು ಕರೆದ್ರೂ ಸಂದೀಪ್ ಬಂದಿಲ್ಲ. ಹಲವು ಬಾರಿ ಕೂಗಿದ್ರೂ ಇಬ್ಬರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೊನೆಗೆ ಬಾಗಿಲಿನ ಕಿಂಡಿಯಲ್ಲಿ ಇಣುಕಿ ನೋಡಿದಾಗ ಇಬ್ಬರ ಶವ ನೇತಾಡುವುದು ಕಾಣಿಸಿದೆ. ಕೂಡಲೇ ಸಂದೀಪ್ ಕುಟುಂಬಸ್ಥರು ಗ್ರಾಮದ ಹಿರಿಯರಿಗೆ ವಿಷಯ ತಿಳಿಸಿದ್ದಾರೆ.
ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿ ಸಂದೀಪ್ ಮನೆ ಮುಂದೆ ಬಂದಿದ್ದಾರೆ. ಸ್ಥಳ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಆದ್ರೆ ಜೋಡಿಯ ನಿರ್ಧಾರಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗ್ತಿದೆ ಎಂದು ಡಬವಾಲಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Comments are closed.