ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಅಬ್ಬರ ಕೊಂಚ ಮಟ್ಟಿಗೆ ಇಳಿಕೆ ಕಾಣುತ್ತಿದ್ದು, ಕಳೆದ ಕೆಲವು ದಿನಗಲಿಂದ ಸರಾಸರಿ 60 ಸಾವಿರಕ್ಕಿಂತ ಹೆಚ್ಚಾಗಿ ದಾಖಲಾಗುತ್ತಿದ್ದ ಕೊರೋನಾ ವೈರಸ್ ಪ್ರಕರಣಗಳು ಸೋಮವಾರ 57,982ರಷ್ಟು ದಾಖಲಾಗಿವೆ.
ಒಂದೇ ದಿನ 57,982 ಮಂದಿಯಲ್ಲಿ ಸೋಂಕು ಪತ್ತೆಯಾಗುವ ಮೂಲಕ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 26,47,664ಕ್ಕೆ ಹೆಚ್ಚಳಗೊಂಡಿದೆ. ಇನ್ನು ಒಂದೇ ದಿನ ಕೊರೋನಾ ವೈರಸ್’ಗೆ 941 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 50,921ಕ್ಕೆ ತಲುಪಿದೆ.
6 ದಿನಗಳ ಬಳಿಕ ದೈನಂದಿನ ಕೊರೋನಾ ವೈರಸ್ ಪ್ರಕರಣಗಳು ಎರಡನೇ ಬಾರಿ 60 ಸಾವಿರಕ್ಕಿಂತ ಕಡಿಮೆ ದಾಖಲಾಗಿವೆ. ಹೀಗಾಗಿ ಕೊರೋನಾ ವೈರಸ್ ಪ್ರಕರಣಗಳು ಇಳಿಕಿಯಾಗುವ ಆಶಾವಾದ ಗೋಚರಿಸಿದೆ.
ಇದೇ ವೇಳೆ 26,47,664 ಮಂದಿ ಸೋಂಕಿತರ ಪೈಕಿ ದೇಶದಲ್ಲಿ 19,19,843 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಗುಣಮುಖರಾದವರ ಸಂಖ್ಯೆ 20 ಲಕ್ಷ ಗಡಿಯತ್ತ ಸಾಗುತ್ತಿದೆ. ದೇಶದಲ್ಲಿನ್ನೂ 6,76,900 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
156 ದಿನದಲ್ಲಿ 50 ಸಾವಿರಕ್ಕೇರಿದ ಸಾವಿನ ಸಂಖ್ಯೆ
ಅಮೆರಿಕಾ, ಬ್ರಿಜೆಲ್ ಮತ್ತು ಮಕ್ಸಿಕೋಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಕೊರೋನಾ ಸಾವಿನ ಪ್ರಕರಣಗಳು 50 ಸಾವಿರ ಗಡಿ ದಾಟಲು ಅತೀ ಹೆಚ್ಚಿನ ದಿನಗಳನ್ನು ತೆಗೆದುಕೊಂಡಿದೆ.
ಅಮೆರಿಕಾದಲ್ಲಿ ಕೊರೋನಾ ಸಾವು ಕೇವಲ 23 ದಿನಗಳಲ್ಲಿ 50 ಸಾವಿರ ಗಡಿ ದಾಟಿತ್ತು. ಬ್ರಿಜಿಲ್ ನಲ್ಲಿ 95 ದಿನ ಹಾಗೂ ಮೆಕ್ಸಿಕೋದಲ್ಲಿ 141 ದಿನಗಳನ್ನು ತೆಗೆದುಕೊಂಡಿದೆ. ಭಾರತದಲ್ಲಿ 156 ದಿನಗಳಿಗೆ ಮೃತರ ಸಂಖ್ಯೆ 50 ಸಾವಿರ ಗಡಿ ದಾಟಿದೆ.
Comments are closed.