
ತಿರುಮಲ: ಕೋವಿಡ್ ಲಾಕ್ ಡೌನ್ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬಳಿಕ ತಿರುಪತಿ ದೇವಾಲಯದಲ್ಲಿ ಟಿಟಿಡಿಯ 743 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದೆ.
ಟಿಟಿಡಿ ಕಾರ್ಯಕಾರಿ ಅಧಿಕಾರಿ ಅನಿಲ್ ಕುಮಾರ್ ಸಿಂಗ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಜೂ.11 ರ ಬಳಿಕ ದೇವಾಲಯ ತೆರದ ನಂತರದ ದಿನಗಳಲ್ಲಿ 743 ಟಿಟಿಡಿ ಸಿಬ್ಬಂದಿಗಳಿಗೆ ಸೋಂಕು ತಗುಲಿದೆ ಈ ಪೈಕಿ 402 ಜನರು ಚೇತರಿಸಿಕೊಂಡಿದ್ದು ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉಳಿದ 338 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೋನಾಗೆ ಟಿಟಿಡಿಯ ಮೂವರು ಸಿಬ್ಬಂದಿಗಳು ಈ ವರೆಗೂ ಬಲಿಯಾಗಿದ್ದು , ನಮ್ಮ ಉದ್ಯೋಗಿಗಳಿಗೆ, ಸಿಬ್ಬಂದಿಗಳಿಗೆ ಕೋವಿಡ್ ಕೇಂದ್ರಗಳಲ್ಲಿ ಅತ್ಯುತ್ತಮವಾದ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ತಿರುಪತಿಯಲ್ಲಿ ಮಾತ್ರ ಕೊರೋನಾ ಪ್ರಕರಣಗಳು ಏರಿಕೆಯಾಗುತ್ತಿಲ್ಲ. ರಾಜ್ಯ, ದೇಶಾದ್ಯಂತ ಏರಿಕೆಯಾಗುತ್ತಿದೆ ಎಂದು ಅನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ. ಜುಲೈ ತಿಂಗಳಲ್ಲಿ 2.38 ಲಕ್ಷ ಯಾತ್ರಾರ್ಥಿಗಳು ತಿರುಪತಿ ಬಾಲಾಜಿ ದರ್ಶನ ಮಾಡಿದ್ದಾರೆ
Comments are closed.