ರಾಷ್ಟ್ರೀಯ

ಎರಡು ಮದುವೆಯಾಗಿ 1.5 ಕೋಟಿ ದೋಚಿ, ಮೂರನೇ ಮದುವೆಯಾಗಿ ಸಿಕ್ಕಿಬಿದ್ದ ಚಾಲಾಕಿ!

Pinterest LinkedIn Tumblr


ನವದೆಹಲಿ: ಆಕೆ ಎರಡು ಬಾರಿ ಮದುವೆಯಾಗಿದ್ದವಳು. ಮೂರನೇ ಬಾರಿ ಮದುವೆಯಾಗಿ ಗಂಡನೊಂದಿಗೆ ಕ್ಯಾಲಿಫೋರ್ನಿಯಾಗೆ ಹಾರಬೇಕಿತ್ತು. ಆದರೆ, ಚಾಲಾಕಿ ಅತ್ತೆ ಅದಕ್ಕೆ ಅವಕಾಶ ಕೊಡಲಿಲ್ಲ.

ಜಾರ್ಖಂಡ್​ ಮೂಲದ ಮಹಿಳೆ ಮೊದಲ ಬಾರಿಗೆ ಗಿರಿಧ್​ ಜಿಲ್ಲೆಯ ರಾಜ್​ಧನ್ವರ್​ನ ನಿಲಯ್​ಕುಮಾರ್​ ಎಂಬುವರನ್ನು ಮದುವೆಯಾಗಿ ಎರಡು ವರ್ಷ ಸಂಸಾರ ನಡೆಸಿದ್ದಳು. ಬಳಿಕ ಆತ ಒಂದು ಕೋಟಿ ರೂ. ಕೊಡುವಂತೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಳು.

ಇದಾದ ಬಳಿಕ ಗುಜರಾತ್​ನ ಅಮಿತ್​ ಮೋದಿ ಎಂಬುವರನ್ನು ಬಲೆಗೆ ಬೀಳಿಸಿಕೊಂಡ ಮಹಿಳೆ ಆತನನ್ನು ಮದುವೆಯಾದಳು. ಕುಟುಂಬ ಕಷ್ಟದಲ್ಲಿದೆ ಎಂದು ನೆಪ ಹೇಳಿ 40- 45 ಲಕ್ಷ ರೂ. ವಂಚಿಸಿದ್ದಳು. ಡಿವೋರ್ಸ್​ ಸಿಗದಾದಾಗ ತನ್ನ ತಂಗಿ ದೆಹಲಿಗೆ ತೆರಳುತ್ತಿದ್ದು, ಬಿಟ್ಟು ಬರುವುದಾಗಿ ಹೇಳಿ ಮನೆಯಿಂದ ಹೋದವಳು ಮತ್ತೆ ಮರಳಲೇ ಇಲ್ಲ.

ಇದಾದ ಬಳಿಕ ಪುಣೆಯ ಸುಮಿತ್​ ದಶರತ್​ ಪವಾರ್​ ಎಂಬುವರನ್ನು ಮದುವೆಯಾದಳು. ಈತ ಕ್ಯಾಲಿಫೋರ್ನಿಯಾದಲ್ಲಿ ಉದ್ಯೋಗದಲ್ಲಿದ್ದ. ಪಾಸ್​ಪೋರ್ಟ್​ಗೆ ಅರ್ಜಿ ಸಲ್ಲಿಸಲು ತನ್ನ ಊರಾದ ಛತ್ರ ಜಿಲ್ಲೆಯ ಇಟ್ಕೋರಿ ಗ್ರಾಮದ ವಿಳಾಸ ಬಳಸಲೇಬೇಕಾಯಿತು. ಈ ನಡುವೆ, ಆಕೆಯ ಫೋನ್​ ಅತ್ತೆಯ ಕೈಗೆ ಸಿಕ್ಕಿತ್ತು. ಅದರಲ್ಲಿ ಆಕೆ ತನ್ನ ಹಳೆಯ ಗಂಡಂದಿರ ಜತೆಗಿರುವ ಫೋಟೋ ಸಿಕ್ಕಿದೆ. ಇದರಿಂದ ಸಂಶಯಗೊಂಡ ಅತ್ತೆ ವಿಚಾರಣೆ ನಡೆಸಿದಾಗ ಈಕೆಯ ಬಣ್ಣವೆಲ್ಲ ಬಯಲಾಗಿದೆ.

ಪ್ರತಿಬಾರಿ ಮದುವೆಯಾಗುವಾಗಲೂ ಆಕೆ ಮ್ಯಾಟ್ರಿಮೋನಿ ವೆಬ್​ಸೈಟ್​ಗಳಲ್ಲಿ ಹೊಸ ಪ್ರೊಫೈಲ್​ ಕ್ರಿಯೇಟ್​ ಮಾಡುತ್ತಿದ್ದಳು. ತಾನು ಈ ಹಿಂದೆ ಮದುವೆಯಾಗಿದ್ದನ್ನು ಮುಚ್ಚಿಡುತ್ತಿದ್ದಳು. ಸದ್ಯ ಈಕೆ ವಿರುದ್ಧ ಪುಣೆ ಪೊಲೀಸರು ಪಾಸ್​ಪೋರ್ಟ್​ಗೆ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಕೇಸ್​ ದಾಖಲಿಸಿದ್ದಾರೆ.

Comments are closed.