ರಾಷ್ಟ್ರೀಯ

ರಾಮಮಂದಿರ ನಿರ್ಮಾಣದ ತಲೆಮಾರುಗಳ ಆಶಯ ಈಡೇರಿದೆ: ಯೋಗಿ ಆದಿತ್ಯನಾಥ್‌

Pinterest LinkedIn Tumblr

ಅಯೋಧ್ಯೆ: ಹಲವು ದಶಕಗಳ ಹಾಗೂ ಹಲವು ತಲೆಮಾರುಗಳ ಕನಸು ಇಂದು ನನಸುಗೊಂಡಿದೆ. ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡ್ಡಿಗಲ್ಲು ಇಡುವ ಮೂಲಕ ಕೋಟ್ಯಂತರ ಜನರ ಆಶಯವನ್ನು ಪೂರ್ಣಗೊಳಿಸಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದ್ದಾರೆ.

ರಾಮಮಂದಿರಕ್ಕೆ ದಿವ್ಯ ಮುಹೂರ್ತದಲ್ಲಿ ಭೂಮಿ ಪೂಜೆ ನಡೆಸಿದ ನಂತರ ಆಹ್ವಾನಿ ಕೆಲವೇ ಕೆಲವು ಗಣ್ಯರು, ಸಾಧು, ಸಂತರ ಸಮ್ಮುಖ ಉದ್ದೇಶಿಸಿ ಭಾಷಣ ಮಾಡಿದರು.

ರಾಮಮಂದಿರ ನಿರ್ಮಾಣಕ್ಕೆ ಮಾತ್ರವಲ್ಲ ಇಂದು ಶಿಲಾನ್ಯಾಸ ನೆರವೇರಿಸಿದ್ದು, ಇಡೀ ದೇಶದ ಪ್ರತಿಯೊಬ್ಬ ನಾಗರಿಕರ ವಿಶ್ವಾಸವನ್ನು ಪಡೆದು ಅಭಿವೃದ್ಧಿಯನ್ನು ಮುನ್ನಡೆಯುವ ಸಂಕಲ್ಪವನ್ನು ತೊಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತಿಳಿಸಿದರು.

ರಾಮಮಂದಿರ ಕಟ್ಟಬೇಕೆಂಬ ಕನಸು ಕೇವಲ ಒಂದು ವರ್ಗ ಅಥವಾ ಪಕ್ಷದ್ದಾಗಿರಲಿಲ್ಲ. ಇದು ಲಕ್ಷಾಂತರ ಜನರ ಆಶಯ ಕೂಡ ಆಗಿತ್ತು. ಅದು ಈಗ ಈಡೇರಿದೆ. ಇದನ್ನು ನೆರವೇರಿಸಲು ನೆರವಾಗಿರುವ ಪ್ರಧಾನಿ ನರೇಂದ್ರ ಮೋದಿಗೆ ಆಭಾರಿ ಎಂದು ಹೇಳಿದರು.

 

Comments are closed.