ರಾಷ್ಟ್ರೀಯ

ಅಮೇರಿಕಾದಲ್ಲಿ TikTok ನಿಷೇಧದ ಆದೇಶ ಹೊರಡಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

Pinterest LinkedIn Tumblr


ನವದೆಹಲಿ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಟಿಕ್ ಟಾಕ್ (TikTok) ನಿಷೇಧವಿಧಿಸಿ ಆದೇಶ ಹೊರಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ ತಾನು ಅಮೇರಿಕಾವನ್ನು ತೊರೆಯುವುದಿಲ್ಲ ಎಂದು ಹೇಳಿದೆ. ಈ ಆಪ್ ಮೇಲೆ ಬೇಹುಗಾರಿಕೆಯ ಶಂಕೆ ವ್ಯಕ್ತಪಡಿಸಿರುವ ಟ್ರಂಪ್ ಆಪ್ ಅನ್ನು ಬಂದ್ ಮಾಡಲು ಸೂಚಿಸಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಈ ಘೋಷಣೆಯ ಬಳಿಕ ಅಮೇರಿಕಾದಲ್ಲಿರುವ ಟಿಕ್ ಟಾಕ್ ಕಂಪನಿಯ ಜನರಲ್ ಮ್ಯಾನೇಜರ್ ವನೆಸಾ ಹೇಳಿಕೆ ನೀಡಲು ಮುಂದಕ್ಕೆ ಬಂದಿದ್ದಾರೆ. ಈ ಕುರಿತು ಬಳಕೆದಾರರಿಗೆ ಸಂದೇಶ ನೀಡಿರುವ ಅವರು, ತಮ್ಮ ಕಂಪನಿ ಬಳಕೆದಾರರಿಗೆ ಸುರಕ್ಷಿತ ಸೇವೆ ಒದಗಿಸಲು ಪ್ರತಿಬದ್ಧವಾಗಿದೆ. ಕಂಪನಿಯ ಮೇಲೆ ಬ್ಯಾನ್ ವಿಧಿಸಿರುವ ಕುರಿತು ಹೇಳಿಕೆ ನೀಡಿರುವ ಅವರು, ತಮ್ಮ ಕಂಪನಿ US ತೊರೆಯುವುದಿಲ್ಲ ಎಂದು ಹೇಳಿದ್ದಾರೆ.

Comments are closed.