ರಾಷ್ಟ್ರೀಯ

ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ 43 ಮಂದಿಗೆ ಕೊರೋನಾ ಪಾಸಿಟಿವ್!

Pinterest LinkedIn Tumblr


ತಿರುವನಂತಪುರ: ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಬರೋಬ್ಬರಿ 43 ಮಂದಿಗೆ ಕೊರೋನಾ ಪಾಸಿಟಿವ್ ಬಂದಿರುವ ಘಟನೆ ಕೇರಳದ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ.

ಸೋಂಕು ಹಿನ್ನೆಲೆಯಲ್ಲಿ ಇದೀಗ ವಿವಾಹ ಕಾರ್ಯಕ್ರಮ ಆಯೋಜನೆಗೊಳಿಸಿದ್ದ ವಧುವಿನ ತಂದೆಯ ವಿರುದ್ಧ ಬಡಿಯುಡುಕ್ಕ ಪೊಲೀಸ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ವಧು ಹಾಗೂ ವರನಲ್ಲೂ ಕೊರೋನಾ ಪಾಸಿಟಿವ್ ಬಂದಿದೆ ಎಂದು ಹೇಳಲಾಗುತ್ತಿದೆ. ವಿವಾಹ ಕಾರ್ಯಕ್ರಮ ಕಾಸರಗೊಡಿನ ಚೆಂಗಲದಲ್ಲಿ ಜು.17 ರಂದು ನಡೆದಿತ್ತು ಎನ್ನಲಾಗಿದೆ.

ಇನ್ನು ಮದುವೆಯಲ್ಲಿ ಪಾಲ್ಗೊಂಡಿದ್ದ ಜನರು ಹೋಮ್ ಕ್ವಾರಂಟೈನ್ ಆಗುವಂತೆ ಹಾಗೂ ಲಕ್ಷಣಗಳು ಕಂಡು ಬಂದಿದ್ದರೆ, ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

Comments are closed.