ರಾಷ್ಟ್ರೀಯ

ಪಕ್ಕದ ಮನೆಯ ಮಹಿಳೆಯ ಸ್ನಾನ ಮಾಡುವ ದೃಶ್ಯ ಚಿತ್ರೀಕರಿಸಿ 2 ವರ್ಷದಿಂದ ಅತ್ಯಾಚಾರ

Pinterest LinkedIn Tumblr


ಬುಲಂದ್​ಶಹರ್​: ಇಲ್ಲಿನ ಸಿಂಕಂದ್ರಾಬಾದ್ ಪಟ್ಟಣದ ನಿವಾಸಿ ತನ್ನ ನೆರೆಮನೆಯಾಕೆ ಸ್ನಾನ ಮಾಡುತ್ತಿರುವ ದೃಶ್ಯವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡು ಆಕೆಯ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದಾನೆ. ಇದರಿಂದ ನೊಂದಿರುವ ಸಂತ್ರಸ್ತೆ ಉತ್ತರ ಪ್ರದೇಶ ಸಿಎಂ ಅವರ ಕಂಪ್ಲೇಂಟ್​ ಪೋರ್ಟಲ್​ನಲ್ಲಿ ಈ ಬಗ್ಗೆ ದೂರಿಕೊಂಡು, ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾಳೆ.

ಸಂತ್ರಸ್ತೆ ಮತ್ತು 50 ವರ್ಷದ ಪುರುಷ ಇಬ್ಬರೂ ಅಕ್ಕಪಕ್ಕದ ಬಾಡಿಗೆ ಮನೆಯಲ್ಲಿ ತಮ್ಮ ತಮ್ಮ ಕುಟುಂಬದವರೊಂದಿಗೆ ವಾಸವಾಗಿದ್ದಾರೆ. ಅದೊಂದು ದಿನ ಸಂತ್ರಸ್ತೆ ಸ್ನಾನ ಮಾಡುತ್ತಿರುವ ದೃಶ್ಯವನ್ನು ಆ ವ್ಯಕ್ತಿ ಚಿತ್ರೀಕರಿಸಿಕೊಂಡಿದ್ದ. ಆ ವಿಡಿಯೋವನ್ನು ಮಹಿಳೆಗೆ ತೋರಿಸಿ, ದೈಹಿಕ ಸಂಪರ್ಕಕ್ಕೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹರಿಬಿಡುವುದಾಗಿ ಬೆದರಿಸಿದ್ದ.

ಅದೊಂದು ದಿನ ಮಹಿಳೆಯ ಪತಿ ರಾತ್ರಿಪಾಳಿಯ ಕೆಲಸಕ್ಕೆ ಹೋದ ಬಳಿಕ ಯಾರಿಗೂ ಗೊತ್ತಾಗದ ಹಾಗೆ ಮಹಿಳೆಯ ಕೋಣೆಯೊಳಗೆ ಹೋದ ವ್ಯಕ್ತಿ ಮೊದಲ ಬಾರಿಗೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಆನಂತರದಿಂದ 2 ವರ್ಷ ನಿರಂತರವಾಗಿ ಅತ್ಯಾಚಾರ ಎಸಗುತ್ತಲೇ ಇದ್ದಾನೆ. ಇದನ್ನು ನಿಲ್ಲಿಸುವಂತೆ ಹೇಳಿದರೆ, ತನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಮಹಿಳೆ ಅಲವತ್ತುಕೊಂಡಿದ್ದಾಳೆ. ಇತ್ತೀಚೆಗೆ ಮನನೊಂದ ಸಂತ್ರಸ್ತೆ ಉತ್ತರ ಪ್ರದೇಶ ಸಿಎಂ ಅವರ ಕಂಪ್ಲೇಂಟ್​ ಪೋರ್ಟಲ್​ನಲ್ಲಿ ದೂರು ದಾಖಲಿಸಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಗಳು ಇದುವರೆಗೂ ಈ ಬಗ್ಗೆ ಅಧಿಕೃತವಾಗಿ ಯಾವುದೇ ದೂರು ಬಂದಿಲ್ಲ. ಸಂತ್ರಸ್ತೆ ಲಿಖಿತ ದೂರು ನೀಡಿದರೆ ತಕ್ಷಣವೇ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Comments are closed.