ರಾಷ್ಟ್ರೀಯ

ರಾಮಮಂದಿರ ನಿರ್ಮಾಣ ಪ್ರಾರಂಭಕ್ಕೆ ಇದು ಅಶುಭ ಘಳಿಗೆ- ಶಂಕರಾಚಾರ್ಯ ಸ್ವರೂಪನಂದ್ ಸರಸ್ವತಿ

Pinterest LinkedIn Tumblr


ನವದೆಹಲಿ: ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಶಿಲಾನ್ಯಾಸ ಸಮಾರಂಭ ನಡೆಯಲಿದ್ದು ಇದನ್ನು ಶಂಕರಾಚಾರ್ಯ ಸ್ವರೂಪಾನಂದ್ ಸರಸ್ವತಿಯವರು ವಿರೋಧಿಸಿದ್ದು ರಾಮ ದೇವಾಲಯದ ನಿರ್ಮಾಣ ಕಾರ್ಯಗಳು ಸರಿಯಾದ ಸಮಯದಲ್ಲಿ ಪ್ರಾರಂಭವಾಗಬೇಕು ಎಂದು ಹೇಳಿದ್ದಾರೆ.

“ನಾವು ಯಾವುದೇ ಸ್ಥಾನವನ್ನು ಬಯಸುವುದಿಲ್ಲ ಅಥವಾ ರಾಮಮಂದಿರದ ಟ್ರಸ್ಟಿಯಾಗಲು ಬಯಸುವುದಿಲ್ಲ. ಆದರೆ ದೇವಾಲಯವನ್ನು ಸರಿಯಾದ ಸಮಯದಲ್ಲಿ ನಿರ್ಮಿಸಬೇಕು ಮತ್ತು ಸರಿಯಾದ ಸಮಯದಲ್ಲಿ ಅಡಿಪಾಯ ಹಾಕಬೇಕು ಎಂದು ನಾವು ಬಯಸುತ್ತೇವೆ.

ಇದನ್ನು ಅಶುಭ ಘಳಿಗೆ ಎಂದು ಕರೆಯಲು ಶಂಕರಾಚಾರ್ಯರು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡದಿದ್ದರೂ, ಅವರು ಮಹಾಮಾರಿ ಕೊರೋನಾವೈರಸ್ ಅನ್ನು ಉಲ್ಲೇಖಿಸುತ್ತಿರಬಹುದು.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮಮಂದಿರ ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿರುವಾಗಲೂ ಶಂಕರಾಚಾರ್ಯರು ಈ ಹೇಳಿಕೆಯನ್ನು ನೀಡಿದ್ದಾರೆ.

“ನಾವು ಶ್ರೀರಾಮನ ಪರಮ ಭಕ್ತರು, ಯಾರಾದರೂ ರಾಮಮಂದಿರವನ್ನು ನಿರ್ಮಿಸಿದರೂ ನಾವು ಸಂತೋಷಪಡುತ್ತೇವೆ. ಆದರೆ ಅದಕ್ಕಾಗಿ ಸೂಕ್ತ ದಿನಾಂಕ ಮತ್ತು ಶುಭ ಸಮಯವನ್ನು ಆರಿಸಬೇಕು. ಇದರಲ್ಲಿ ರಾಜಕೀಯ ಇರಬಾರದು. ಸಾರ್ವಜನಿಕರ ಹಣದಿಂದ ದೇವಾಲಯವನ್ನು ನಿರ್ಮಿಸಲಾಗುತ್ತಿದೆ ಅವರ ಅಭಿಪ್ರಾಯವನ್ನೂ ಸಹ ಪಡೆಯಬೇಕು ಎಂದು ಶಂಕರಾಚಾರ್ಯ ಸರಸ್ವತಿ ಹೇಳಿದ್ದಾರೆ.

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

Comments are closed.