ರಾಷ್ಟ್ರೀಯ

ಲಡಾಖ್ ನ ತನ್ನ ಗಡಿಯ ಮುಂಭಾಗ ಚೀನಾದಿಂದ 40,000 ಸೈನಿಕರ ನಿಯೋಜನೆ: ವರದಿ

Pinterest LinkedIn Tumblr


ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಪರಿಸ್ಥಿತಿಯನ್ನು ತಿಳಿಗೊಳಿಸುವ ಮನಸ್ಥಿತಿಯಲ್ಲಿಲ್ಲ, ಏಕೆಂದರೆ ಪೂರ್ವ ಲಡಾಕ್ ವಲಯದಲ್ಲಿ 40,000 ಸೈನಿಕರನ್ನು ತನ್ನ ಗಡಿಯ ಮುಂಭಾಗ ಹಾಗೂ ಅಚ್ಚುಕಟ್ಟು ಪ್ರದೇಶದಲ್ಲಿ ನಿಯೋಜನೆ ಮಾಡಿದೆ ಎಂದು ಮೂಲಗಳು ಹೇಳಿದೆ.

ಪೂರ್ವ ಲಡಾಕ್‌ನಲ್ಲಿ ಸಂಘ್ರಷ ನಡೆದ ಜಾಗಗಳಲ್ಲಿ ಚೀನಿಯರು ತಮ್ಮ ಮಾತುಗಳನ್ನು ಒಪ್ಪಿ ಹಿಂದೆ ಸರಿಯುತ್ತಿಲ್ಲ ಸರ್ಕಾರ ಮತ್ತು ಸೇನಾ ಮಟ್ಟದಲ್ಲಿ ಅನೇಕ ಸುತ್ತಿನ ಮಾತುಕತೆ ಮತ್ತು ಉನ್ನತ ಮಟ್ಟದಲ್ಲಿ ಆದ ಒಪ್ಪಂದಕ್ಕೆ ಕಿಮ್ಮತ್ತು ನೀಡುತ್ತಿಲ್ಲ ಎಂದು ಮೂಲಗಳು ಹೇಳಿದೆ.

ವಾಯು ರಕ್ಷಣಾ ವ್ಯವಸ್ಥೆಗಳು, ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳು ಗಡಿಯ ಮುಂಭಾಗ ಹಾಗೂ ಆಯಕಟ್ಟಿನ ಪ್ರದೇಶಗಳಲ್ಲಿ ದೀರ್ಘ-ಶ್ರೇಣಿಯ ಫಿರಂಗಿದಳದಂತಹ ಆಯುಧಗಳನ್ನು ಸಹ ಹೊಂದಿರುವ 40,000 ಸೈನಿಕರನ್ನು ನಿಯೋಜನೆ ಮಾಡಲಾಗುತ್ತಿದೆ. ಆದ ಕಾರಣ ಶಾಂತಿಯನ್ನು ಸ್ಥಾಪಿಸುವ ಉದ್ದೇಶ ಚೀನೀಯರಿಗಿದ್ದಂತಿಲ್ಲ ಎಂದು ಮೂಲಗಳು ಹೇಳಿದೆ.

ಕಳೆದ ವಾರ ನಡೆದ ಎರಡು ರಾಷ್ಟ್ರಗಳ ನಡುವಿನ ಕಮಾಂಡರ್‌ಗಳ ನಡುವಿನ ಕೊನೆಯ ಸುತ್ತಿನ ಮಾತುಕತೆ ನಂತರವೂ ಗಡಿಯಲ್ಲಿ ಶಾಂತಿಯ ಸಂಬಂಧ ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಚೀನಿಯರು ಫಿಂಗರ್ 5 ಪ್ರದೇಶದಿಂದ ಹೊರಹೋಗಲು ಹಿಂಜರಿಯುತ್ತಿದ್ದಾರೆ ಎನ್ನಾಲಾಗಿದೆ.ಅಂತೆಯೇ, ಅವರು ಪೂರ್ವ ಲಡಾಖ್ ವಲಯದ ಎರಡು ಪ್ರಮುಖ ಘರ್ಷಣೆ ಕೇಂದ್ರಗಳಾದ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪೋಸ್ಟ್ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ರಚನೆಗಳ ನಿರ್ಮಾಣವನ್ನು ಮಾಡಿದ್ದಾರೆ. ಹಾಟ್ ಸ್ಪ್ರಿಂಗ್ಸ್ ಮತ್ತು ಗೊಗ್ರಾ ಪ್ರದೇಶದಲ್ಲಿ, ಚೀನಾದವರು ತಮ್ಮ ಗಡಿಯ ಭಾಗದಿಂಡ ಹಿಮ್ಮೆಟ್ಟಿದ ನಂತರ ಜುಲೈ 14-15ರಂದು ಕಾರ್ಪ್ಸ್ ಕಮಾಂಡರ್-ಮಟ್ಟದ ಅಧಿಕಾರಿಗಳ ನಡುವಿನ ಕೊನೆಯ ಸಭೆಯಲ್ಲಿಗಡಿಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ಬಗ್ಗೆ ತೀರ್ಮಾನವಾಗಿತ್ತು ಈ ವಿಷಯವನ್ನು ಸಂಪೂರ್ಣವಾಗಿ ಬಗೆಹರಿಸಲು ಮತ್ತು ಎರಡೂ ಕಡೆಯ ಶಾಂತಿಗಾಗಿ ಎರಡೂ ಕಡೆಯವರು ತಮ್ಮ ಶಾಶ್ವತ ಸ್ಥಳಗಳಿಗೆ ಹಿಂತಿರುಗಬೇಕಾಗುತ್ತದೆ ಎಂದು ಎನ್‌ಎಸ್‌ಎ ಚೀನಾದ ಕಡೆಯೊಂದಿಗಿನ ಸಂವಾದದ ಸಮಯದಲ್ಲಿ ಸ್ಪಷ್ಟಪಡಿಸಿತ್ತು.

Comments are closed.