ರಾಷ್ಟ್ರೀಯ

ಬಾಬರಿ ಮಸೀದಿ ಧ್ವಂಸ ಪ್ರಕರಣ; ಜುಲೈ 24ರಂದು ಅಡ್ವಾಣಿ ವಿಚಾರಣೆ

Pinterest LinkedIn Tumblr


ಹೊಸದಿಲ್ಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಜುಲೈ 24ರಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ಹೇಳಿಕೆಯನ್ನು ದಾಖಲಿಸಲಾಗುವುದು ಎಂದು ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ತಿಳಿಸಿದೆ.

ಎಲ್‌.ಕೆ.ಅಡ್ವಾಣಿ ಮಾತ್ರವಲ್ಲದೇ ಪ್ರಕರಣದ ಇತರ ಆರೋಪಿಗಳಾಗಿರುವ ಶಿವಸೇನಾ ಪಕ್ಷದ ಮುಖಂಡ ಸತೀಶ್ ಪ್ರಧಾನ್ ಅವರನ್ನು ಕೂಡ ವಿಚಾರಣೆ ಮಾಡಲಾಗುತ್ತೆ. ಆದ್ರೆ ಇವರಿಬ್ಬರ ವಿಚಾರಣೆ ಪ್ರತ್ಯೇಕ ದಿನದಂದು ನಡೆಯಲಿದ್ದು ಅಡ್ವಾಣಿಯವರ ಹೇಳಿಕೆಯನ್ನು ಜುಲೈ 24ರಂದು ದಾಖಲಿಸಿದರೆ, ಸತೀಶ್ ಪ್ರಧಾನ್ ವಿಚಾರಣೆ ಜುಲೈ 22ರಂದು ಮತ್ತು ಜುಲೈ 23ಕ್ಕೆ ಬಿಜೆಪಿ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಅವರನ್ನು ವಿಚಾರಣೆ ಮಾಡಲಿದ್ದಾರೆ.

ಸದ್ಯದ ಸ್ಥಿತಿಗತಿಗಳನ್ನು ಗಮನಿಸಿ ಅಪರಾಧ ದಂಡ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ) ಕಲಂ 313 ಅನುಸಾರ ಎಲ್.ಕೆ.ಅಡ್ವಾಣಿ ಸೇರಿದಂತೆ ಎಲ್ಲಾ ಆರೋಪಿಗಳ ಹೇಳಿಕೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ದಾಖಲಿಸಲಾಗುತ್ತದೆ ಎಂದು ತಿಳಿದುಬಂದಿದೆ.

Comments are closed.