ರಾಷ್ಟ್ರೀಯ

ಆಸ್ಪತ್ರೆಯಲ್ಲಿದ್ದ ರೋಗಿಯ ಮನೆಗೆ ನುಗ್ಗಿ, ಮಟನ್ ಬಿರಿಯಾನಿ ಮಾಡಿ ತಿಂದು, ಚಿನ್ನಾಭರಣ ಕದ್ದ ಕಳ್ಳರು!

Pinterest LinkedIn Tumblr


ಜಾರ್ಖಂಡ್ (ಜು. 19): ಕೊರೋನಾದಿಂದಾಗಿ ನಾವು ಕಂಡು-ಕೇಳಿರದ ಅದೆಷ್ಟೋ ಘಟನೆಗಳು ನಮ್ಮ ನಡುವೆ ಘಟಿಸುತ್ತಲೇ ಇವೆ. ಅದೇರೀತಿ ಜಾರ್ಖಂಡ್​ನಲ್ಲಿ ಕೊರೋನಾ ರೋಗಿಯ ಮನೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಕೊರೋನಾ ಸೋಂಕು ತಗುಲಿದ್ದರಿಂದ ಆಸ್ಪತ್ರೆಯಲ್ಲಿದ್ದ ರೋಗಿಯ ಮನೆಗೆ ನುಗ್ಗಿದ ಕಳ್ಳರು ಆತನ ಮನೆಯಲ್ಲಿ ಮಟನ್ ಬಿರಿಯಾನಿ ಮಾಡಿ, ಗಡದ್ದಾಗಿ ಊಟ ಮಾಡಿಕೊಂಡು 50 ಸಾವಿರ ರೂ. ಹಣ ಹಾಗೂ 50 ಸಾವಿರ ರೂ. ಮೌಲ್ಯದ ಚಿನ್ನಾಭರಣವನ್ನೂ ದೋಚಿಕೊಂಡು ಹೋಗಿದ್ದಾರೆ!

ಜಾರ್ಖಂಡ್​ನ ಜಮ್​ಶೆಡ್​ಪುರದ ಹಲೂದ್ಬೋನಿ ಎಂಬ ಊರಿನಲ್ಲಿ ಈ ಘಟನೆ ನಡೆದಿದೆ. ಮನೆಯ ಮಾಲೀಕನಿಗೆ ಕೊರೋನಾ ಸೋಂಕು ತಗುಲಿ, ಆತ ಆಸ್ಪತ್ರೆಗೆ ಸೇರಿರುವ ವಿಚಾರ ಕಳ್ಳರಿಗೆ ಗೊತ್ತಾಗಿತ್ತು. ಸೋಂಕಿತನ ಮನೆಯವರನ್ನು ಕೂಡ ಬೇರೆಡೆ ಕ್ವಾರಂಟೈನ್​ನಲ್ಲಿರಿಸಲಾಗಿತ್ತು. ಇದೆಲ್ಲವನ್ನೂ ತಿಳಿದಿದ್ದ ಕಳ್ಳರು ಆ ಮನೆಯ ಬಾಗಿಲು ಮುರಿದು, ಮನೆಯೊಳಗೆ ನುಗ್ಗಿದ್ದರು. ಅಲ್ಲದೆ, ಅಂಗಡಿಯಿಂದ ಮಟನ್ ತಂದು, ಮಟನ್ ಕರಿ ಮಾಡಿ, ಚಪಾತಿ ಮತ್ತು ಅನ್ನ ಮಾಡಿಕೊಂಡು ಊಟ ಮಾಡಿದ್ದಾರೆ.

ಹಾಲೂದ್ಬೋನಿ ಕಂಟೈನ್​ಮೆಂಟ್​ ಜೋನ್​ನಲ್ಲಿದೆ. ಇಲ್ಲಿನ ಕೊರೋನಾ ಸೋಂಕಿತ ರೋಗಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ವೇಳೆ ಮನೆಗೆ ನುಗ್ಗಿದ ಕಳ್ಳರು ಅಡುಗೆ ಮಾಡಿ, ಚಿನ್ನಾಭರಣ, ಮೊಬೈಲ್​ಗಳನ್ನು ದೋಚಿಕೊಂಡು ಹೋಗಿದ್ದಾರೆ. ಆ ಕುಟುಂಬದ ಸಂಬಂಧಿಕರು ಮನೆಯನ್ನು ನೋಡಿಕೊಂಡು ಹೋಗಲು ಬಂದಾಗ ಕಳ್ಳತನದ ವಿಚಾರ ಬೆಳಕಿಗೆ ಬಂದಿದೆ.

Comments are closed.