ನವದೆಹಲಿ(ಜುಲೈ 18): ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿ ಜುಲೈ 5ರಂದು ಪ್ರಸವವೂ ಆಗಿದೆ. 14 ವರ್ಷದ ಈ ಬಾಲಕಿಯ ಈ ಪರಿಸ್ಥಿತಿಗೆ 84 ವರ್ಷ ವಯೋವೃದ್ಧನೊಬ್ಬ ಕಾರಣ ಎಂಬ ಆರೋಪವಿದೆ. ಜೈಲಿನಲ್ಲಿರುವ ಈ ವೃದ್ಧ ತಾನು ಈ ರೇಪ್ ಮಾಡಿಲ್ಲ. ತನಗೆ ಲೈಂಗಿಕ ಕ್ರಿಯೆ ಮಾಡುವ ಶಕ್ತಿಯೂ ಇಲ್ಲ ಎಂದು ವಾದಿಸುತ್ತಿದ್ದಾರೆ. ಈ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಬಾಲಕಿಯ ಮಗುವಿನ ತಂದೆ ಯಾರೆಂದು ಪತ್ತೆಹಚ್ಚಲು ಪಶ್ಚಿಮ ಬಂಗಾಳದ 84 ವರ್ಷದ ವೃದ್ಧನ ಡಿಎನ್ಎ ಪರೀಕ್ಷೆ ನಡೆಸುವಂತೆ ಕೋರ್ಟ್ ಆದೇಶಿಸಿದೆ.
ಆರೋಪಿಯ ಪರ ಹಿರಿಯ ವಕೀಲ ಕಪಿಲ್ ಅವರು ವಾದ ಮಾಡುತ್ತಿದ್ದು, ಜಾಮೀನು ಪಡೆಯಲು ಮನವಿ ಮಾಡಿದ್ಧಾರೆ. ಇಂಥ ಇಳಿವಯಸ್ಸಿನಲ್ಲಿ ಲೈಂಗಿಕ ಸಂಭೋಗ ಮಾಡಲು ಹೇಗೆ ಸಾಧ್ಯ. ತಾನು ಲೈಂಗಿಕ ಅಸಮರ್ಥನಾಗಿದ್ದೇನೆ ಎಂಬುದು ಈ ವೃದ್ಧನ ವಾದ. ಕಪಿಲ್ ಸಿಬಲ್ ಕೂಡ ತನ್ನ ಕಕ್ಷಿದಾರನಿಗೆ ವಯಸ್ಸಿನ ಜೊತೆಗೆ ಹಲವು ಅನಾರೋಗ್ಯಗಳಿದ್ದು, ಲೈಂಗಿಕ ಚಟುವಟಿಕೆಗೆ ಅಸಮರ್ಥನಾಗಿದ್ಧಾರೆ ಎಂದು ವಾದಿಸಿದ್ಧಾರೆ.
ಹಾಗೆಯೇ, ಡಿಎನ್ಎ ಪರೀಕ್ಷೆ, ಪಿತೃತ್ವ ಪರೀಕ್ಷೆ ಸೇರಿದಂತೆ ಯಾವುದೇ ಪರೀಕ್ಷೆಗಾದರೂ ಒಳಪಡಲು ತನ್ನ ಕಕ್ಷಿದಾರ ಒಪ್ಪಿದ್ದಾರೆ. ಮೇ 12ರಿಂದಲೂ ಇವರು ಜೈಲಿನಲ್ಲಿದ್ದಾರೆ. ಅವರ ಆರೋಗ್ಯಸ್ಥಿತಿ ಹದಗೆಡುತ್ತಲೇ ಇದೆ. ಪರೀಕ್ಷೆ ಮಾಡಿಸುವುದಾದರೆ ಬೇಗ ಮಾಡಿಸಿ ಎಂದು ವಕೀಲ ಕಪಿಲ್ ಸಿಬಲ್ ಕೋರ್ಟ್ಗೆ ತಿಳಿಸಿದ್ದಾರೆ.
ಇದಾದ ಬಳೀಕ ನ್ಯಾಯಾಲಯವು ಡಿಎನ್ಎ ಮತ್ತು ಪ್ಯಾಟರ್ನಿಟಿ ಪರೀಕ್ಷೆಗಳನ್ನ ನಡೆಸುವಂತೆ ನಿರ್ದೇಶನ ನೀಡಿತು. ಮೂರು ವಾರಗಳ ಬಳಿಕ ಮತ್ತೆ ಕೋರ್ಟ್ ವಿಚಾರಣೆ ನಡೆಸಲಿದೆ.
14 ವರ್ಷದ ಬಾಲಕಿಯ ಕುಟುಂಬದವರು ತನ್ನ ಮನೆಯಲ್ಲಿ ಬಾಡಿಗೆಗಿದ್ದಾರೆ. ಬಾಡಿಗೆ ವಿಚಾರದಲ್ಲಿ ವಿವಾದ ಉಂಟಾಗಿ ತನ್ನ ವಿರುದ್ಧ ಸುಳ್ಳು ಆರೋಪಗಳನ್ನ ಮಾಡಲಾಗಿದೆ ಎಂಬುದು ಆರೋಪಿಯ ವಾದವಾಗಿದೆ.
Comments are closed.