ರಾಷ್ಟ್ರೀಯ

ದೇಶದಲ್ಲಿ ಇದುವರೆಗೆ 1302 ವೈದ್ಯರಿಗೆ ಸೋಂಕು: 99 ಸಾವು

Pinterest LinkedIn Tumblr


ನವದೆಹಲಿ: ದೇಶದಲ್ಲಿ ಕೊರೋನಾ ಮಹಾಮಾರಿಯಿಂದ ಜನ ಸಾಯುವುದರ ಜೊತೆಗೆ ಅವರಿಗೆ ಚಿಕಿತ್ಸೆ ನೀಡುತ್ತಿರುವ ಸರ್ಕಾರಿ ವೈದ್ಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ದೇಶಾದ್ಯಂತ 1302 ವೈದ್ಯರಿಗೆ ಕೊರೋನಾ ಸೋಂಕು ತಗುಲಿರುದ್ದರೆ, ಮುಂಬೈನಲ್ಲಿ ಸಾವಿರಕ್ಕಿಂತಲೂ ಹೆಚ್ಚು ಆರೋಗ್ಯ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಕೊರೋನಾ ವಿರುದ್ಧ ಹೋರಾಡುತ್ತಿರುವ ವೈದ್ಯರ ಪೈಕಿ ಇದುವರೆಗೂ 99 ಜನರು ಮೃತಪಟ್ಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ವೈದ್ಯರು ಸಾವನ್ನಪ್ಪಿದ್ದು ಮೃತಪಟ್ಟವರಲ್ಲಿ 73 ಮಂದಿ ವೈದ್ಯರು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. 35-50 ವಯಸ್ಸಿನ 19 ಜನ ವೈದ್ಯರು ಹಾಗೂ 35 ವರ್ಷಕ್ಕಿಂತ ಕೆಳಗಿನ ವಯಸ್ಸಿನ 7 ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ.

ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ವೈದ್ಯರು ವೃತ್ತಿಬದುಕಿನ ಭರವಸೆಯ ದಾರಿದೀಪವಾಗಿದ್ದರೂ, ಕೊರೋನಾದಿಂದ ವೈದ್ಯರು ಸಾವನ್ನಪ್ಪತ್ತಿರುವುದು ಬಹಳ ಆತಂಕಕಾರಿ ಸಂಗತಿಯಾಗಿದೆ.

Comments are closed.