ರಾಷ್ಟ್ರೀಯ

ಕೇರಳದಲ್ಲಿ ಇಂದು 623 ಹೊಸ ಸೋಂಕು ಪ್ರಕರಣಗಳು ಪತ್ತೆ

Pinterest LinkedIn Tumblr


ಕೊಚ್ಚಿ: ದೇಶದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ಕಾಣಿಸಿಕೊಂಡ ಕೇರಳದಲ್ಲಿ ಇಂದು ಮತ್ತೆ ಹೊಸದಾಗಿ 623 ಮಂದಿಯಲ್ಲಿ ಕೊರೋನಾ ವೈರಸ್ ಒಕ್ಕರಿಸಿದೆ.

ಹೌದು.. ಕೇರಳದಲ್ಲಿ ಕೊರೋನಾ ವೈರಸ್ 2ನೇ ಹಂತದ ಆರ್ಭಟ ಆರಂಭಿಸಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದ್ದು, ಇದಕ್ಕೆ ಕಾರಣ ಇತ್ತೀಚೆಗೆ ಕೇರಳದಲ್ಲಿ ಪತ್ತೆಯಾಗುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ. ಈ ಹಿಂದೆ ಕೊರೋನಾ ವೈರಸ್ ಅನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತಂದಿದ್ದ ಕೇರಳದಲ್ಲಿ ಮತ್ತೆ ನಿಧಾನವಾಗಿ ಕೊರೋನಾ ವೈರಸ್ ಆರ್ಭಟ ಆರಂಭಿಸಿದೆ.

ಇಂದು ಒಂದೇ ದಿನ ಕೇರಳದಲ್ಲಿ ಹೊಸದಾಗಿ 623 ಮಂದಿಯಲ್ಲಿ ಕೊರೋನಾ ವೈರಸ್ ಒಕ್ಕರಿಸಿದೆ. ಆ ಮೂಲಕ ಕೇರಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 9553ಕ್ಕೆ ಏರಿಕೆಯಾಗಿದೆ. ಈ ಪೈಕಿ 157 ಪ್ರಕರಣಗಳು ತಿರುವನಂತಪುರಂ ನಿಂದಲೇ ವರದಿಯಾಗಿದೆ. ಇನ್ನು ಕೇರಳದಲ್ಲಿ ಒಟ್ಟಾರೆ 4880 ಸಕ್ರಿಯ ಪ್ರಕರಣಗಳಿದ್ದು, 4,673 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

Comments are closed.