ರಾಷ್ಟ್ರೀಯ

ಜಿಯೋದಲ್ಲಿ ಗೂಗಲ್ ಹೂಡಿಕೆ; 2021 ರ ವೇಳೆಗೆ ಜಿಯೋ 5 ಜಿ ಸ್ಮಾರ್ಟ್ ಫೋನ್ ಬಿಡುಗಡೆ!

Pinterest LinkedIn Tumblr


ಜಿಯೋ ಸಂಸ್ಥೆಯಲ್ಲಿ ಗೂಗಲ್ 33,000 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದು ರಿಲಾಯನ್ಸ್ ಇಂಡಸ್ಟ್ರೀಸ್ ಟೆಕ್ನಾಲಜಿಯಲ್ಲಿ ಸಂಸ್ಥೆಯ ಶೇ.7.7 ರಷ್ಟು ಪಾಲುದಾರಿಕೆ ಪಡೆಯಲಿದೆ ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ.

ಜು.15 ರಂದು ನಡೆದ ರಿಲಾಯನ್ಸ್ ನ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, 2021 ರ ವೇಳೆಗೆ ಗೂಗಲ್ ಸಹಯೋಗದಲ್ಲಿ ಭಾರತದಲ್ಲೇ 5 ಜಿ ನೆಟ್ವರ್ಕ್ ಗೆ ಬೆಂಬಲಿಸುವ ಸ್ಮಾರ್ಟ್ ಫೋನ್ ಬಿಡುಗಡೆಯನ್ನೂ ಘೋಷಿಸಿದ್ದಾರೆ.

“ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡುತ್ತಿರುವ ಗೂಗಲ್ ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೇವೆ” ಎಂದು ಅಂಬಾನಿ ತಿಳಿಸಿದ್ದಾರೆ. ರಿಲಾಯನ್ಸ್ ಈಗ ಶೂನ್ಯ ಸಾಲ ಹೊಂದಿರುವ ಸಂಸ್ಥೆಯಾಗಿದೆ.

ಗೂಗಲ್ ಹಾಗೂ ಜಿಯೋ ಜೊತೆಗೂಡಿ 2021 ರ ವೇಳೆಗೆ ಅಗ್ಗದ ದರದ 5 ಜಿ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಲಿವೆ. ಈ ವರೆಗೂ 100 ಮಿಲಿಯನ್ ಜಿಯೋ ಫೋನ್ ಗಳನ್ನು ಮಾರಾಟ ಮಾಡಲಾಗಿದ್ದು, ಸಾಮಾನ್ಯದ ಮೊಬೈಲ್ ಬಳಕೆದಾರರು ಸಾಂಪ್ರದಾಯಿಕ ಸ್ಮಾರ್ಟ್ ಗೆ ಅಪ್ ಗ್ರೇಡ್ ಆಗಲು ಬಯಸುತ್ತಿದ್ದಾರೆ. ನಾವು ಪ್ರಾರಂಭಿಕ ಬೆಲೆಯ 4 ಜಿ ಅಥವಾ 5 ಜಿ ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಲಿದ್ದೇವೆ, ಗೂಗಲ್ ಹಾಗೂ ಜಿಯೋ ಇದಕ್ಕಾಗಿ ಪಾಲುದಾರಿಕೆಗೆ ಮುಂದಾಗಿದ್ದು, ಆಂಡ್ರಾಯ್ಡ್ ಆಧರಿತ ಸ್ಮಾರ್ಟ್ ಫೋನ್ ಆಪರೇಟಿಂಗ್ ಸಿಸ್ಟಮ್ ನ್ನು ತಯಾರಿಸಲಿವೆ ಎಂದು ಸಂಸ್ಥೆಯ 43 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಬಾನಿ ಘೋಷಿಸಿದ್ದಾರೆ.

ಜಿಯೋ ದೇಶಿಯ 5 ಜಿ ಟೆಲಿಕಾಂ ಸೊಲ್ಯೂಷನ್ ನ್ನು ಅಭಿವೃದ್ಧಿಪಡಿಸಿದ್ದು, 5 ಜಿ ಸ್ಪೆಕ್ಟ್ರಮ್ ಲಭ್ಯವಾದ ಬೆನ್ನಲ್ಲೇ ಜಿಯೋ ಅಭಿವೃದ್ಧಿಪಡಿಸಿರುವ 5 ಜಿ ಟೆಲಿಕಾಂ ಸೊಲ್ಯೂಷನ್ ಸಹ ಪರೀಕ್ಷೆಗೆ ಸಿದ್ಧವಾಗಲಿದೆ, ಮುಂದಿನ ವರ್ಷದ ವೇಳೆಗೆ ಫೀಲ್ಡ್ ಡೆವಲ್ಪೆಂಟ್ ಗೂ ಲಭ್ಯವಾಗಲಿದೆ ಎಂದು ಅಂಬಾನಿ ತಿಳಿಸಿದ್ದಾರೆ. ಇದೇ ವೇಳೆ ಗೂಗಲ್ ಸಿಇಒ ಸುಂದರ್ ಪಿಚ್ಚೈ ಸಹ ಪ್ರತಿಕ್ರಿಯೆ ನೀಡಿದ್ದು, ಜಿಯೋ ಜೊತೆ ಪಾಲುದಾರಿಕೆಗೆ ಮುಂದಾಗುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

Comments are closed.