ರಾಷ್ಟ್ರೀಯ

ಓರ್ವ ಡಿವೈಎಸ್ಪಿ, ಮೂರು ಸಬ್ ಇನ್ ಸ್ಪೆಕ್ಟರ್ ಸೇರಿ 8 ಪೊಲೀಸರ ಹಂತಕ ರೌಡಿ ವಿಕಾಸ್ ದುಬೆ ಮನೆ-ಐಷಾರಾಮಿ ಕಾರುಗಳು ಜಖಂ!

Pinterest LinkedIn Tumblr


ಲಖನೌ: ಎಂಟು ಪೊಲೀಸರನ್ನು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಮನೆ ಹಾಗೂ ಐಷಾರಾಮಿ ಕಾರುಗಳನ್ನು ಜಿಲ್ಲಾಡಳಿತ ಕೆಡವಿ ಹಾಕಿದೆ.

ಉತ್ತರ ಪ್ರದೇಶದ ಪೊಲೀಸರು ಕೊಲೆ ಪ್ರಕರಣ ಸಂಬಂಧ ವಿಕಾಸ್ ದುಬೆಯನ್ನು ಬಂಧಿಸಲು ತೆರಳಿದ್ದಾಗ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಓರ್ವ ಡಿವೈಎಸ್ಪಿ, ಮೂರು ಸಬ್ ಇನ್ ಸ್ಪೆಕ್ಟರ್ ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್ ಗಳು ಸೇರಿದಂತೆ ಒಟ್ಟು ಎಂಟು ಪೊಲೀಸರನ್ನು ಹತ್ಯೆ ಮಾಡಲಾಗಿತ್ತು.

ಈ ಹತ್ಯೆಕಾಂಡದ ನಂತರ ವಿಕಾಸ್ ದುಬೆ ತಲೆಮರೆಸಿಕೊಂಡಿದ್ದು ಆತನನ್ನು ಬಂಧಿಸಲು 26 ತಂಡಗಳನ್ನು ರಚಿಸಲಾಗಿದೆ. ಇನ್ನು ವಿಕಾಸ್ ದುಬೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಕಾನ್ಪುರದ ಪೊಲೀಸುರ ಘೋಷಿಸಿದ್ದಾರೆ.

Comments are closed.