ಕರ್ನಾಟಕ

32 SSLC ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಪತ್ತೆ

Pinterest LinkedIn Tumblr


ಬೆಂಗಳೂರು (ಜು.4): ಕೊರೋನಾ ವೈರಸ್​ ಭೀತಿ ನಡುವೆಯೂ ರಾಜ್ಯದಲ್ಲಿ 7,61,506 ವಿದ್ಯಾರ್ಥಿಗಳು ಈ ಬಾರಿಯ ಎಸ್​ಎಲ್​ಎಲ್​ಸಿ ಪರೀಕ್ಷೆ ಬರೆದಿದ್ದರು. ಈ ಪೈಕಿ 32 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ ಎಂದು ಸರ್ಕಾರದ ದಾಖಲೆಗಳು ಹೇಳಿವೆ.

ರಾಜ್ಯದಲ್ಲಿ ಜೂನ್​ 25ರಿಂದ ಜು.3ರವರೆಗೆ ನಡೆದಿತ್ತು. ಕೊರೋನಾ ಉಲ್ಬಣ ಗೊಳ್ಳುತ್ತಿರುವ ಮಧ್ಯೆಯೇ ಸರ್ಕಾರ ಪರೀಕ್ಷೆ ನಡೆಸುತ್ತಿರುವುದಕ್ಕೆ ವಿಪಕ್ಷ ನಾಯಕರಿಂದ ಹಾಗೂ ಪಾಲಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅಗತ್ಯ ಮುಂಜಾಗೃತ ಕ್ರಮ ಕೈಗೊಂಡು ಸರ್ಕಾರ ಎ​ಎಸ್​ಎ​ಸ್​ಎಲ್​ಸಿ ಪರೀಕ್ಷೆ ನಡೆಸಿತ್ತು. ಹೀಗೆ ಪರೀಕ್ಷೆ ಬರೆದವರಲ್ಲಿ 32 ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್​ ಪತ್ತೆ ಆಗಿದೆ.

ಕೊರೋನಾ ಸೋಂಕು ಪತ್ತೆಯಾದ 32 ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದ 80 ವಿದ್ಯಾರ್ಥಿಗಳು ಹೋಮ್​ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಇವರಲ್ಲಿ ಲಕ್ಷಣ ಕಂಡು ಬಂದರೆ ಆಸ್ಪತ್ರೆಗೆ ದಾಖಲು ಮಾಡಲು ನಿರ್ಧರಿಸಲಾಗಿದೆ.

ಕಂಟೇನ್​ಮೆಂಟ್​ ಝೋನ್​ ಎಂದು ಗುರುತಿಸಲ್ಪಟ್ಟ ಭಾಗದ 3,911 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. ಅನಾರೋಗ್ಯದಿಂದ 863 ವಿದ್ಯಾರ್ಥಿಗಳು ಪರೀಕ್ಷೆ ಬರೆದಿಲ್ಲ. ಮಾರ್ಚ್​​ 2—ಏಪ್ರಿಲ್​9ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಬೇಕಿತ್ತು. ಆದರೆ, ಲಾಖ್​ಡೌನ್ ಘೋಷಣೆ ಆ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಸರ್ಕಾರ ಮುಂದೂಡಿತ್ತು.

ಕೊರೋನಾ ವೈರಸ್​ ಮಿತಿಮೀರಿ ಹರಡುತ್ತಿದ್ದು, ಈ ಸಂದರ್ಭದಲ್ಲಿ ಪರೀಕ್ಷೆ ನಡೆಸಿದ ಮಕ್ಕಳ ಜೀವದ ಜೊತೆ ಆಟ ಆಡಿದಂತಾಗುತ್ತದೆ ಎಂದು ವಿಪಕ್ಷ ನಾಯಕರು ಅಭಿಪ್ರಾಯಪಟ್ಟಿದ್ದರು. ಆದಾಗ್ಯೂ, ಸರ್ಕಾರ ಪರೀಕ್ಷೆ ನಡೆಸಿತ್ತು. ಅಲ್ಲದೆ, ಸಂಪೂರ್ಣ ಮುಂಜಾಗೃತ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿತ್ತು.

Comments are closed.