ರಾಷ್ಟ್ರೀಯ

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ನವೆಂಬರ್ ವರೆಗೆ ವಿಸ್ತರಣೆ: ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ:ಕೋವಿಡ್ 19 ವೈರಸ್ ಹರಡುತ್ತಿರುವ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು “ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ನವೆಂಬರ್ ವರೆಗೆ ವಿಸ್ತರಿಸುವುದಾಗಿ ಮಂಗಳವಾರ ಘೋಷಿಸಿದ್ದು, ಇದರಿಂದ ಪ್ರತಿ ತಿಂಗಳು ಸುಮಾರು 80 ಕೋಟಿಗೂ ಅಧಿಕ ಮಂದಿ ಐದು ಕೆಜಿ ಗೋಧಿ ಅಥವಾ ಅಕ್ಕಿ ಉಚಿತವಾಗಿ ಪಡೆಯಲಿದ್ದಾರೆ ಎಂದು ಹೇಳಿದರು.

ಕೊರೊನಾ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಪ್ರತಿಯೊಂದು ಕುಟುಂಬಕ್ಕೂ ನವೆಂಬರ್ ವರೆಗೆ ಉಚಿತವಾಗಿ ಒಂದು ಕೆಜಿ ಬೇಳೆಕಾಳು ನೀಡಲಾಗುವುದು. ಈ ಎರಡು ಉಚಿತ ಯೋಜನೆಗೆ ಒಟ್ಟು 90 ಸಾವಿರ ಕೋಟಿ ರೂಪಾಯಿ ವ್ಯಯವಾಗಲಿದೆ ಎಂದು ತಿಳಿಸಿದರು.

16ನಿಮಿಷಗಳ ಕಾಲ ಮಾತನಾಡಿದ ಅವರು, ಒಂದು ರಾಷ್ಟ್ರ ಒಂದು ರೇಷನ್ ಕಾರ್ಡ್ ಮಾದರಿಯಂತೆ, ದೇಶದ ಯಾವುದೇ ರಾಜ್ಯದಲ್ಲಿರುವ ವಲಸಿಗರಿಗೆ ಅವರ ರಾಜ್ಯದಲ್ಲಿಯೇ ಉಚಿತ ಪಡಿತರ ವಿತರಿಸಲಾಗುವುದು ಎಂದು ಹೇಳಿದರು.

Comments are closed.