ರಾಷ್ಟ್ರೀಯ

ಅಲ್ಪ ಏರಿಕೆ ಕಂಡ ಚಿನ್ನ-ಬೆಳ್ಳಿ ದರ

Pinterest LinkedIn Tumblr


ನವದೆಹಲಿ(ಜೂ.22): ವಿಶ್ವದೆಲ್ಲೆಡೆ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವ ನಡುವೆಯೇ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ.

ಇಂದು 10 ಗ್ರಾಂ ಚಿನ್ನದ ಬೆಲೆ 47,950 ರೂನಿಂದ 47,960 ರೂಪಾಯಿಗೆ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರದಲ್ಲಿ ಕೂಡ ಏರಿಕೆ ಕಂಡಿದ್ದು, 1 ಕೆ.ಜಿ ಬೆಳ್ಳಿಗೆ 48,670 ರೂಪಾಯಿ ಆಗಿದೆ. ಈ ಮೂಲಕ ದೇಶಾದ್ಯಂತ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಗುಡ್​ ರಿಟರ್ನ್ಸ್​ ವೆಬ್​ವೈಟ್​ ಪ್ರಕಾರ, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 47,760 ರೂಪಾಯಿ ಇದೆ. ಚೆನ್ನೈನಲ್ಲಿ 46,090 ರೂಪಾಯಿ, ಮುಂಬೈನಲ್ಲಿ 46,860 ರೂ ಇದೆ ಎಂದು ತಿಳಿದು ಬಂದಿದೆ. ಇನ್ನು, ಚೆನ್ನೈನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 50,280 ರೂಪಾಯಿಗೆ ಏರಿಕೆಯಾಗಿದೆ.

ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಶುಲ್ಕ ವಿಧಿಸುವಿಕೆಯಿಂದಾಗಿ ಭಾರತದಾದ್ಯಂತ ಚಿನ್ನಾಭರಣಗಳ ಬೆಲೆಗಳು ಬದಲಾಗುತ್ತಿವೆ ಎಂದು ತಿಳಿದು ಬಂದಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಔನ್ಸ್​ ಚಿನ್ನದ ಬೆಲೆ 1729 ಡಾಲರ್​​​ನಷ್ಟಿದೆ. ಇನ್ನು, ಒಂದು ಔನ್ಸ್​ ಬೆಳ್ಳಿಯ ಬೆಲೆ 17.49 ಡಾಲರ್​​​ನಷ್ಟಿದೆ.

Comments are closed.