ರಾಷ್ಟ್ರೀಯ

ನಿಮ್ಮ ಫೋನ್ ನಲ್ಲಿ ಈ 30 ಆಪ್ ಗಳಿದ್ದರೆ ಡಿಲೀಟ್ ಮಾಡಿ…

Pinterest LinkedIn Tumblr


ನವದೆಹಲಿ: ಅಪಾಯಕಾರಿ ಮಾಲ್ವೇಯರ್ ಹೊಂದಿರುವ ಹಿನ್ನೆಲೆ ವಿಶ್ವದ ಖ್ಯಾತ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಒಟ್ಟು 30 ಆಪ್ ಗಳನ್ನು ತೆಗೆದುಹಾಕಿದೆ. ಹೀಗಾಗಿ ನೀವು ಇನ್ಮುಂದೆ ಈ ಆಪ್ ಗಳನ್ನು ನೀವು ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡುವಂತಿಲ್ಲ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗೂಗಲ್ ಈ ಆಪ್ ಗಳಲ್ಲಿ ಅಪಾಯಕಾರಿ ಮಾಲ್ವೆಯರ್ ಕಂಡುಬಂದಿವೆ ಎಂದು ಹೇಳಿದೆ. ಹೀಗಾಗಿ ಒಂದು ವೇಳೆ ನಿಮ್ಮ ಮೊಬೈಲ್ ನಲ್ಲಿಯೂ ಕೂಡ ಈ ಆಪ್ ಗಳಿದ್ದರೆ ತಕ್ಷಣ ಅವುಗಳನ್ನು ನಿಮ್ಮ ಮೊಬೈಲ್ ನಿಂದ ತೆಗೆದುಹಾಕಿ. ಹಾಗಾದರೆ ಬನ್ನಿ ಆ 30 ಆಪ್ ಗಳು ಯಾವವು ಎಂಬುದನ್ನು ತಿಳಿಯೋಣ.

2 ಕೋಟಿ ಬಾರಿ ಡೌನ್ ಲೋಡ್ ಗೆ ಒಳಗಾಗಿವೆ
ಹೊಸ ಬಳಕೆದಾರರಿಗೆ ಈ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ , ಇದುವರೆಗೆ ಈ ಅಪ್ಲಿಕೇಶನ್‌ಗಳನ್ನು 2 ಕೋಟಿಗಿಂತ ಅಧಿಕ ಬಾರಿಗೆ ಡೌನ್‌ಲೋಡ್ ಮಾಡಲಾಗಿದೆ. ಈ ಅಪ್ಲಿಕೇಶನ್‌ಗಳನ್ನು ತಮ್ಮ ಫೋನ್‌ಗಳಿಂದ ತಕ್ಷಣ ತೆಗೆದುಹಾಕುವಂತೆ ಗೂಗಲ್ ಬಳಕೆದಾರರಿಗೆ ಸೂಚಿಸಿದೆ. ಈ ಅಪ್ಲಿಕೇಶನ್‌ಗಳ ವಿವರ ಇಲ್ಲಿದೆ.

ಅಪ್ಲಿಕೇಶನ್ ಗಳು ಒಟ್ಟು ಡೌನ್ಲೋಡ್
Yoriko Camera 1 ಲಕ್ಷ
Solu Camera 5 ಲಕ್ಷ
Lite Beauty Camera 10 ಲಕ್ಷ
Beauty Collage Lite 5 ಲಕ್ಷ
Beauty and Filters camera 10 ಲಕ್ಷ
Photo Collage and beauty camera 1 ಲಕ್ಷ
Gaty Beauty Camera 5 ಲಕ್ಷ
Pand Selife Beauty Camera 50 ಸಾವಿರ
Cartoon Photo Editor and Selfie Beauty Camera 10 ಲಕ್ಷ
Benbu Seilfe Beauty Camera 10 ಲಕ್ಷ
Pinut Selife Beauty and Photo Editor 10 ಲಕ್ಷ
Mood Photo Editor and Selife Beauty Camera 5 ಲಕ್ಷ
Rose Photo Editor and Selfie Beauty Camera 10 ಲಕ್ಷ
Selife Beauty Camera and Photo Editor 1 ಲಕ್ಷ
Fog Selife Beauty Camera 1 ಲಕ್ಷ
First Selife Beauty Camera and Photo Editor 50 ಲಕ್ಷ
Vanu Selife Beauty Camera 1 ಲಕ್ಷ
Sun Pro Beauty Camera 10 ಲಕ್ಷ
Funny Sweet Beauty Camera 5 ಲಕ್ಷ
Little Bee Beauty Camera 10 ಲಕ್ಷ
Beauty Camera and Photo Editor Pro 10 ಲಕ್ಷ
Grass Beauty Camera 10 ಲಕ್ಷ
Ele Beauty Camera 10 ಲಕ್ಷ
Flower Beauty Camera 1 ಲಕ್ಷ
Best Selfie Beauty Camera 10 ಲಕ್ಷ
Orange Camera 5 ಲಕ್ಷ
Sunny Beauty Camera 10 ಲಕ್ಷ
Pro Selfie Beauty Camera 5 ಲಕ್ಷ
Selfie Beauty Camera Pro 10 ಲಕ್ಷ
Elegant Beauty Cam-2019 50 ಸಾವಿರ

ವರದಿಯಿಂದ ಈ ಮಾಹಿತಿ ಬಹಿರಂಗವಾಗಿದೆ
ವೈಟ್‌ಆಪ್ಸ್ ಭದ್ರತಾ ಸಂಶೋಧಕರು ಈ ಅಪ್ಲಿಕೇಶನ್‌ಗಳ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ರೀತಿಯ ಅಪ್ಲಿಕೇಶನ್‌ ಗಳಲ್ಲಿ ನೀವು ಸಾಕಷ್ಟು ರೀತಿಯ ಜಾಹೀರಾತುಗಳನ್ನು ಗಮನಿಸಬಹುದಾಗಿದೆ. ಅಷ್ಟೇ ಅಲ್ಲ, ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದೆ, ಬಳಕೆದಾರರನ್ನು ಜಾಹೀರಾತುಗಳ ಮೇಲೆ ರೀಡೈರೆಕ್ಟ್ ಮಾಡಲಾಗುತ್ತದೆ. ಹೀಗಾಗಿ ಒಂದು ವೇಳೆ ನಿಮ್ಮ ಫೋನ್‌ನಲ್ಲಿಯೂ ಕೂಡ ಈ ಆಪ್ ಗಳನ್ನು ಡೌನ್ಲೋಡ್ ಮಾಡಿದ್ದರೆ ಅವುಗಳನ್ನು ತಕ್ಷಣ ಅನ್ ಇನ್ಸ್ಟಾಲ್ ಮಾಡಿ.

Comments are closed.