ರಾಷ್ಟ್ರೀಯ

ಮಿಜೋರಾಂನಲ್ಲಿ ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಭೂಕಂಪ: ಪದೇ ಪದೇ ಕಂಪಿಸುತ್ತಿದೆ ‘ಈಶಾನ್ಯ’ ಭೂಮಿ..!

Pinterest LinkedIn Tumblr


ಹೊಸ ದಿಲ್ಲಿ: ಉತ್ತರ ಭಾರತಕ್ಕೇ ಏಕೋ ಗ್ರಹಚಾರವೇ ಸರಿ ಇದ್ದಂತೆ ಕಾಣುತ್ತಿಲ್ಲ. ದಿಲ್ಲಿ ಸುತ್ತಮುತ್ತಲ ಭಾಗದಲ್ಲಿ ಕೊರೊನಾ ವೈರಸ್‌ ಆರ್ಭಟದ ಜೊತೆಗೆ ಪದೇ ಪದೇ ಭೂಮಿ ಕಂಪಿಸುತ್ತಲೇ ಇದೆ. ಇದೀಗ ಈ ಭೂಕಂಪ ಸರಣಿ ಈಶಾನ್ಯ ರಾಜ್ಯಗಳಿಗೂ ವ್ಯಾಪಿಸಿದೆ. ಮಿಜೋರಾಂನಲ್ಲೂ ಇದೀಗ ಪದೇ ಪದೇ ಭೂಮಿ ಕಂಪಿಸುತ್ತಿದೆ.

ರಿಕ್ಟರ್ ಮಾಪಕದಲ್ಲಿ 5.1ರಷ್ಟು ತೀವ್ರತೆಯ ಮಧ್ಯಮ ತೀವ್ರತೆಯ ಭೂಕಂಪದ ಅನುಭವ ಮಿಜೋರಾಂನಲ್ಲಿ ಆಗಿದೆ. ಕಳೆದ ಜೂನ್ 18ರಂದು ಕೂಡಾ ಮಿಜೋರಾಂನಲ್ಲಿ 5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು.

ಎರಡೂ ಬಾರಿ ಮಧ್ಯಮ ತೀವ್ರತೆಯ ಭೂಕಂಪಗಳೇ ಮಿಜೋರಾಂನಲ್ಲಿ ಸಂಭವಿಸಿದೆ. 2ನೇ ಬಾರಿ ಭಾನುವಾರ ಸಂಭವಿಸಿದ ಭೂಕಂಪ ಸಂಜೆ 4.16ರ ಸಮಯದಲ್ಲಿ ಆಗಿದೆ. ಭೂಕಂಪದ ಕೇಂದ್ರ ಮಿಜೋರಾಂನ ಕೇಂದ್ರ ಭಾಗದಿಂದ 25 ಕಿ.ಮೀ ದೂರದಲ್ಲಿ ಕಂಡು ಬಂದಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಹೇಳಿದೆ.

ಕಳೆದ ಬಾರಿ ಸಂಭವಿಸಿದ ಭೂಕಂಪ ಜೂನ್ 18ರಂದು ಸಂಜೆ 7.30ಕ್ಕೆ ಅನುಭವಕ್ಕೆ ಬಂದಿತ್ತು. ಆಗ ಭೂಕಂಪ ಕೇಂದ್ರ ಮಿಜೋರಾಂನ ಚಂಪೈ ಜಿಲ್ಲೆಯ ಭೂಮಿಯಲ್ಲಿ 80 ಕಿ.ಮೀ ಆಳದಲ್ಲಿ ಪತ್ತೆಯಾಗಿತ್ತು.

ಈಶಾನ್ಯ ರಾಜ್ಯಗಳ ಶಿಲ್ಲಾಂಗ್‌ ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲೂ ಭೂಕಂಪದ ಅನುಭವ ಆಗಿದೆ. ಆದ್ರೆ, ಯಾವುದೇ ರೀತಿಯ ಸಾವು ನೋವುಗಳ ವರದಿ ಆಗಿಲ್ಲ.

Comments are closed.