ರಾಷ್ಟ್ರೀಯ

ವಲಸಿಗರಿಗೆ ರೂ.50 ಸಾವಿರ ಕೋಟಿ ಮೊತ್ತದ ಉದ್ಯೋಗ ಯೋಜನೆಯೊಂದಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ಲಾಕ್’ಡೌನ್ ಸಂದರ್ಭದಲ್ಲಿ ತಮ್ಮ ತವರು ರಾಜ್ಯಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ರೂ.50 ಸಾವಿರ ಕೋಟಿ ಮೊತ್ತದ ಉದ್ಯೋಗ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಗೆ ಚಾಲನೆ ನೀಡಿರುವ ಪ್ರಧಾನಿ ಮೋದಿಯವರು, ಯುವಕರು ಮತ್ತು ಮಹಿಳೆಯರಿಗೆ ಇಂದು ಐತಿಹಾಸಿಕ ದಿನವಾಗಿದೆ. ಲಾಕ್’ಡೌನ್ ಸಮಯದಲ್ಲಿ ಜನರು ಹೆಚ್ಚು ಸಂಖ್ಯೆಯಲ್ಲಿ ಗ್ರಾಮಗಳಿಗೆ ಮರಳಿದ್ದಾರೆ. ತಮ್ಮ ಶ್ರಮ ಹಾಗೂ ಕೌಶಲ್ಯದ ಮೂಲಕ ಗ್ರಾಮವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆ ಅನುಕೂಲ ಮಾಡಿಕೊಡಲಿದೆ. ಜನರ ಭಾವನೆ ಹಾಗೂ ಅಗತ್ಯತೆಗಳನ್ನು ದೇಶ ಅರ್ಥಮಾಡಿಕೊಳ್ಳುತ್ತದೆ. 6 ರಾಜ್ಯಗಳ 116 ಗ್ರಾಮಗಳಲ್ಲಿ ಯೋಜನೆ ಮುನ್ನಡೆಯಲಿದೆ ಎಂದು ಹೇಳಿದ್ದಾರೆ.

ಗರೀಬ್ ಕಲ್ಯಾಣ ರೋಜಗಾರ್ ಅಭಿಯಾನ ಇದಾಗಿದ್ದು, ಹೆಚ್ಚಿನ ವಲಸೆ ಕಾರ್ಮಿಕರು ಇರುವ ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಜಾರ್ಖಂಡ್ ಮತ್ತು ಒಡಿಶಾ ಈ 6 ರಾಜ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ತವರಿಗೆ ಮರಳಿದ ವಲಸೆ ಕಾರ್ಮಿಕರ ಜೀವನಾಧಾರಕ್ಕಾರಿ 125 ದಿನಗಳ ಉದ್ಯೋಗವನ್ನು ಒದಗಿಸಲಾಗುತ್ತದೆ.

Comments are closed.