ರಾಷ್ಟ್ರೀಯ

ಸರ್ಕಾರಿ ನೌಕರರಿಗೊಂದು ಶಾಕಿಂಗ್ ಆದೇಶ

Pinterest LinkedIn Tumblr


ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಒಂದು ಶಾಕಿಂಗ್ ಸುದ್ದಿ ಪ್ರಕಟಗೊಂಡಿದೆ. ಹೌದು, ಏಕೆಂದರೆ, ಇದೀಗ ಅವರು ವಾರ್ಷಿಕ ಅಪ್ರೆಸಲ್ ಗಾಗಿ ಒಂದು ವರ್ಷದವರೆಗೆ ಕಾಯಬೇಕಾಗಲಿದೆ. ಏಕೆಂದರೆ ಕೇಂದ್ರ ಸರ್ಕಾರ 2019-20ರ ಸಾಲಿನ ಕೇಂದ್ರ ಸರ್ಕಾರಿ ನೌಕರರ ವಾರ್ಷಿಕ ಸಾಧನೆಯ ವರದಿಯನ್ನು ಪೂರ್ಣಗೊಳಿಸುವ ಅವಧಿಯನ್ನು ಮುಂದೂಡಿದೆ. ಹೌದು, ಈ ಅವಧಿಯನ್ನು ಇದೀಗ ಮಾರ್ಚ್ 2021ರವರೆಗೆ ಮುಂದೂಡಲಾಗಿದೆ.ಇದಕ್ಕೂ ಮೊದಲು ಇದನ್ನು ಡಿಸೆಂಬರ್ 2020ಕ್ಕೆ ನಿಗದಿಪಡಿಸಲಾಗಿತ್ತು. ಈ ಮೊದಲೂ ಕೂಡ ಸರ್ಕಾರ ಅಪ್ರೆಸಲ್ ಪ್ರಕ್ರಿಯೆಯನ್ನು ಡಿಸೆಂಬರ್ ವರೆಗೆ ಮುಂದೂಡಿತ್ತು. ಆದರೆ, ಇದೀಗ ವಾರ್ಷಿಕ ಇನ್ಕ್ರೀಮೆಂಟ್ ಗಾಗಿ ನೌಕರರು ಮಾರ್ಚ್ 2021ರವರೆಗೆ ಕಾಯಬೇಕಾಗಲಿದೆ.

ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಟ್ರೇನಿಂಗ ಈ ಕುರಿತು ಆದೇಶವೊಂದನ್ನು ಜಾರಿಗೊಳಿಸಿದೆ. ಜೂನ್ 11 ರಂದು ಜಾರಿಗೊಳಿಸಲಾಗಿರುವ ಈ ಆದೇಶದ ಪ್ರಕಾರ, ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿ 2019-20ರ ಅವಧಿಯ APAR ಪೂರ್ಣಗೊಳಿಸುವ ಅವಧಿಯನ್ನು ಡಿಸೆಂಬರ್ 2020 ರಿಂದ ಮಾರ್ಚ್ 2021ಕ್ಕೆ ಮುಂದೂಡುವ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಸರ್ಕಾರದ ಈ ನಿರ್ಣಯ ಗ್ರೂಪ್ ಎ,ಬಿ ಹಾಗೂ ಸಿ ವಿಭಾಗದ ಅಧಿಕಾರಿಗಳ ಮೇಲೆ ಪ್ರಭಾವ ಬೀರಲಿದೆ.

ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ 30 ಮಾರ್ಚ್ 2020ಕ್ಕೆ ಈ ಕುರಿತಾದ ಡೆಡ್ ಲೈನ್ ಅನ್ನು ಮುಂದೂಡಲಾಗಿತ್ತು. ಸಾಮಾನ್ಯವಾಗಿ ಮೇ 31ರವರೆಗೆ ಎಲ್ಲ ನೌಕರರಿಗೆ ಖಾಲಿ ಫಾರ್ಮ್ ಅಥವಾ ಆನ್ಲೈನ್ ಫಾರ್ಮ್ ಭರ್ತಿ ಮಾಡಲು ಸೂಚಿಸಲಾಗುತ್ತದೆ.ಕೇಂದ್ರ ಸರ್ಕಾರಿ ನೌಕರರ ಇನ್ಕ್ರೀಮೆಂಟ್ ಗಾಗಿ ಇದು ಮೊದಲ ಹೆಜ್ಜೆಯಾಗಿದೆ. ಲಾಕ್ ಡೌನ್ ಹಿನ್ನೆಲೆ ಮೇ 31ರವರೆಗೆ ಇದುವರೆಗೆ ಈ ಕೆಲಸ ಪೂರ್ಣಗೊಂಡಿಲ್ಲ. ಇದೆ ಕಾರಣದಿಂದ ಸರ್ಕಾರ ಇದರ ಅವಧಿಯನ್ನು 31 ಜುಲೈ ವರೆಗೆ ಮುಂದೂಡಲಾಗಿದೆ.

ಸಾಮಾನ್ಯವಾಗಿ ಜೂನ್ 30ರವರೆಗೆ ರಿಪೋರ್ಟಿಂಗ್ ಅಧಿಕಾರಿಗೆ ಸೆಲ್ಫ್-ಅಪ್ರೆಸಲ್ ಸಲ್ಲಿಸಬೇಕು. ಇದೆಗ ಇದರ ಅವಧಿಯನ್ನು ಆಗಸ್ಟ್ 31 ವರೆಗೆ ಮುಂದೂಡಲಾಗಿದ್ದು, ಬಳಿಕ ಸೆಪ್ಟೆಂಬರ್ 30 ರವರೆಗೆ ವರದಿಯನ್ನು ರೀವ್ಯೂಗಾಗಿ ರಿವ್ಯೂವಿಂಗ್ ಅಧಿಕಾರಿಗಳ ಬಳಿಗೆ ಕಳುಹಿಸಬೇಕು. ನವೆಂಬರ್ 15 ರವರೆಗೆ ಫಾರ್ಮ್ ಅನ್ನು APAR ಸೆಲ್ ಗೆ ಕಳುಹಿಸಿ ಕೊಡಬೇಕು. ಇದಾದ ನಂತರ ಡಿಸೆಂಬರ್ 31 ಒಳಗೆ ಅಪ್ರೆಸಲ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇದರ ನಂತರದ ಪ್ರಕ್ರಿಯೆಗಾಗಿ 15 ಜನವರಿವರೆಗೆ ಕಾಲಾವಕಾಶ ನೀಡಲಾಗಿದೆ.

Comments are closed.