ರಾಷ್ಟ್ರೀಯ

ಡಿವೈಎಫ್‌ಐ ಅಧ್ಯಕ್ಷ ಮುಹಮ್ಮದ್‌ ಜೊತೆ ಕೇರಳ ಮುಖ್ಯಮಂತ್ರಿ ಮಗಳ ಮದುವೆ

Pinterest LinkedIn Tumblr


ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣ­ ರಾಯಿ ವಿಜಯನ್‌ ಅವರ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್‌ ಅವರ ವಿವಾಹ ಸಿಪಿಐ(ಎಂ) ಯುವ ಘಟಕ ಡೆಮಾಕ್ರೆಟಿಕ್‌ ಯೂತ್‌ ಫೆಡರೇ­ಷನ್‌ ಆಫ್‌ ಇಂಡಿಯಾ (ಡಿವೈಎಫ್‌ಐ) ರಾಷ್ಟ್ರೀಯ ಅಧ್ಯಕ್ಷ ಮುಹಮ್ಮದ್‌ ರಿಯಾಸ್‌ ಅವರೊಂದಿಗೆ ಶೀಘ್ರವೇ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.

ಜೂ.15ರಂದು ಕೇವಲ ಕುಟುಂಬದ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ನೆರವೇರಿಸಲು ತೀರ್ಮಾ­ನಿಸಲಾಗಿದೆ. ಇಬ್ಬರಿಗೂ ಇದು ಎರಡನೇ ವಿವಾಹ ಸಂಬಂಧ. ರಿಯಾಸ್‌ ಅವರು ತಮ್ಮ ಮೊದಲ ಪತ್ನಿ ಡಾ. ಸಮೀಹಾ ಅವರಿಂದ 2015ರಲ್ಲಿ ಬೇರೆ­ಯಾಗಿದ್ದರು. ಇವರಿಗೆ ಇಬ್ಬರು ಪುತ್ರರಿದ್ದಾರೆ. ಇನ್ನು ವೀಣಾ ಅವ­ರಿಗೆ ಒಬ್ಬ ಪುತ್ರನಿದ್ದು, ಅವರು ಕೂಡ 5 ವರ್ಷಗಳ ಹಿಂದೆ ಪತಿ­­ಯಿಂದ ದೂರವಾಗಿ­ದ್ದರು ಎಂದು ರಾಷ್ಟ್ರೀಯ ದೈನಿಕವೊಂದು ವರದಿ­ಮಾಡಿದೆ.

ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋ­ಗಿಯಾಗಿರುವ ವೀಣಾ ರಾಜಕಾರಣ­ದಿಂದ ಅಂತರ ಕಾಯ್ದುಕೊಂಡಿದ್ದಾರೆ. ರಿಯಾಸ್‌ ಅವರು 2009ರ ಲೋಕಸಭೆ ಚುನಾವಣೆಯಲ್ಲಿ ಸಿಪಿಐ­(ಎಂ) ಅಭ್ಯರ್ಥಿ­ಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

Comments are closed.