ರಾಷ್ಟ್ರೀಯ

ಜನರಿಂದ ಪೆಟ್ರೋಲ್,‌ ಡೀಸೆಲ್‌ಗೆ 250% ತೆರಿಗೆ ಪಾವತಿ!

Pinterest LinkedIn Tumblr


ಹೊಸದಿಲ್ಲಿ: ದೇಶದ ಗ್ರಾಹಕರು ಪೆಟ್ರೋಲ್‌ ಖರೀದಿಗಾಗಿ ಶೇ. 250ಕ್ಕೂ ಹೆಚ್ಚಿನ ಅಬಕಾರಿ ಸುಂಕವನ್ನು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಪಾವತಿಸುತ್ತಿದ್ದಾರೆ. ಪೆಟ್ರೋಲ್‌ನ ಮೂಲ ಬೆಲೆ ಲೀಟರ್‌ಗೆ 18 ರೂಪಾಯಿ ಮಾತ್ರ. ಅದಕ್ಕೆ 50 ರೂ.ಗೂ ಅಧಿಕ ಭಾಗದ ತೆರಿಗೆ ಮತ್ತು ಸುಂಕಗಳು ಸೇರಿಕೊಳ್ಳುತ್ತವೆ. ಹೀಗಾಗಿ ದಿಲ್ಲಿಯ ಪೆಟ್ರೋಲ್‌ ಪಂಪ್‌ಗಳಲ್ಲಿ 73 ರೂ.ಗೆ ಮಾರಾಟವಾಗುತ್ತದೆ.

ಇದೇ ರೀತಿ, ಡೀಸೆಲ್‌ಗೆ ಶೇ. 255 ಅಬಕಾರಿ ಸುಂಕವನ್ನು ಗ್ರಾಹಕರು ತೆರುತ್ತಿದ್ದಾರೆ. ಇದರ ಮೂಲ ಬೆಲೆ ರೂ.18.50 ಮಾತ್ರ. ತೆರಿಗೆ ಸುಂಕಗಳಿಂದಾಗಿ ದಿಲ್ಲಿಯಲ್ಲಿ ದರವು ರೂ.71 ಮುಟ್ಟಿದೆ. ಇದು ದಿಲ್ಲಿಯ ಕಥೆ ಮಾತ್ರವಲ್ಲ. ಹೆಚ್ಚು ಕಡಿಮೆ ಎಲ್ಲಾ ರಾಜ್ಯಗಳ ಪರಿಸ್ಥಿತಿ ಇದೇ ಆಗಿದೆ; ಅಲ್ಪ ಸ್ವಲ್ಪ ವ್ಯತ್ಯಾಸಗಳಿರಬಹುದು ಅಷ್ಟೆ.

ಭಾರತೀಯರು ವಿಶ್ವದಲ್ಲಿಯೇ ಹೆಚ್ಚಿನ ತೆರಿಗೆಯನ್ನು ಪೆಟ್ರೋಲ್‌ಗೆ ನೀಡುತ್ತಿದ್ದಾರೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಅಮೆರಿಕದಲ್ಲಿ ಶೇ.19, ಜಪಾನ್‌ನಲ್ಲಿ ಶೇ.47, ಬ್ರಿಟನ್‌ನಲ್ಲಿ ಶೇ.62 ಮತ್ತು ಫ್ರಾನ್ಸ್‌ನಲ್ಲಿ ಶೇ 63ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ನೇರ ತೆರಿಗೆಗಳ ಸಂಗ್ರಹ ಕುಸಿದಿದ್ದು, ಪರೋಕ್ಷ ತೆರಿಗೆಗಳತ್ತ ಸರಕಾರ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಕಪ್ಪು ಚಿನ್ನ ಎಂದು ಗುರುತಿಸಲಾಗುವ ಇಂಧನವು ಉತ್ತಮ ತೆರಿಗೆ ಮೂಲವಾಗಿದೆ.

Comments are closed.