ನವದೆಹಲಿ (ಜೂ. 8): ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಇದರ ಪರಿಣಾಮ ಎಲ್ಲ ವಲಯದ ಮೇಲೂ ಬೀರಿದೆ. ಕರ್ನಾಟಕದಲ್ಲಿ ಜೂನ್ 25ರಿಂದ ಜುಲೈ 4ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸುವುದಾಗಿ ಘೋಷಿಸಲಾಗಿದೆ. ಆದರೆ, ತೆಲಂಗಾಣದಲ್ಲಿ 10ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್ ಮಾಡಲಾಗಿದೆ.
ತೆಲಂಗಾಣ ಸರ್ಕಾರ ಇಂದು ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ. ಕೊರೋನಾ ಕೇಸುಗಳು ಹೆಚ್ಚುತ್ತಲೇ ಇರುವುದರಿಂದ ತೆಲಂಗಾಣದಲ್ಲಿ ಎಸ್ಎಸ್ಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೂ ಕೊರೋನಾ ವೈರಸ್ ಹರಡುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಈ ಬಗ್ಗೆ ಇಂದು ಉನ್ನತ ಮಟ್ಟದ ಸಭೆ ನಡೆಸಿ, ಆದೇಶ ಹೊರಡಿಸಿದ್ದಾರೆ.
ತೆಲಂಗಾಣದ ಎಲ್ಲ 10ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ತೇರ್ಗಡೆ ಮಾಡಲಾಗಿದೆ. ಇಂಟರ್ನಲ್ ಅಂಕಗಳ ಆಧಾರದಲ್ಲಿ ಮಕ್ಕಳಿಗೆ ಗ್ರೇಡ್ಗಳನ್ನು ನೀಡಲಾಗುವುದ. ತೆಲಂಗಾಣದಲ್ಲಿ ಈ ವರ್ಷ 5,34,903 ವಿದ್ಯಾರ್ಥಿಗಳು ಎಸ್ಎಸ್ಸಿ ಪರೀಕ್ಷೆ ಬರೆಯುವವರಿದ್ದರು. ಲಾಕ್ಡೌನ್ನಿಂದ ಮುಂದೂಡಲಾಗಿದ್ದ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ.
Comments are closed.