ರಾಷ್ಟ್ರೀಯ

ಕಂತು ಪಾವತಿ ಮೇಲಿನ ಬಡ್ಡಿ ಮನ್ನಾ ಮಾಡಿದ್ರೆ ಬ್ಯಾಂಕ್‌ಗಳಿಗೆ 2 ಲಕ್ಷ ಕೋಟಿರೂ. ನಷ್ಟ

Pinterest LinkedIn Tumblr

ಹೊಸದಿಲ್ಲಿ: ದೇಶದ ಸರ್ವೋಚ್ಚ ಬ್ಯಾಂಕ್‌ ಆರ್‌ಬಿಐ, ಸರ್ವೋಚ್ಚ ನ್ಯಾಯಾಲಯಕ್ಕೆ ಮಹತ್ವದ ಪ್ರಮಾಣಪತ್ರ ಸಲ್ಲಿಸಿದೆ.

ಕೋವಿಡ್ ಕಾರಣ ಸಾಲದ ಕಂತು ಪಾವತಿ ಮುಂದೂಡಲು ಅದು ಬ್ಯಾಂಕ್‌ಗಳ ಗ್ರಾಹಕರಿಗೆ ಅವಕಾಶ ನೀಡಿತ್ತು.

ಆದರೆ ಈ ವೇಳೆಯ ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ.

ಒಂದು ವೇಳೆ ಹಾಗೆ ಮಾಡಿದರೆ, ಬ್ಯಾಂಕ್‌ಗಳು ಅಧೋಗತಿಗಿಳಿಯಲಿವೆ. ಅವುಗಳು ಒಟ್ಟಾರೆ 2 ಲಕ್ಷ ಕೋಟಿ ರೂ. ಕಳೆದುಕೊಳ್ಳಲಿವೆ.

ಆದ್ದರಿಂದ ತಾನು ಬಡ್ಡಿ ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ತನ್ನ ಪ್ರಮಾಣ ಪತ್ರದಲ್ಲಿ ತಿಳಿಸಿದೆ.

ಅಷ್ಟಲ್ಲದೇ ತಾನು ಕೇವಲ ಕಂತು ಪಾವತಿಯನ್ನು ಮುಂದೂಡಲು ಅವಕಾಶ ನೀಡಿದ್ದೇನೆ, ಅದು ಸಾಲಮನ್ನಾ ಅಲ್ಲ ಎಂದು ಸ್ಪಷ್ಟಪಡಿಸಿದೆ. ಜೂ.5ಕ್ಕೆ ಈ ಪ್ರಕರಣದ ವಿಚಾರಣೆ ಸರ್ವೋಚ್ಚ ನ್ಯಾಯಪೀಠ ನಡೆಸಲಿದೆ.

Comments are closed.