ರಾಷ್ಟ್ರೀಯ

ಮೂವರು ಗೆಳೆಯರೊಂದಿಗೆ ಹೆಂಡತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಪತಿ

Pinterest LinkedIn Tumblr


ತಿರುವನಂತಪುರಂ: ಕೋವಿಡ್ ಅಟ್ಟಹಾಸದ ನಡುವೆಯೇ ವಿಕೃತ ಮನಸ್ಸಿನ ಪತಿ ತನ್ನ ಮೂವರು ಸ್ನೇಹಿತರ ಜತೆಗೂಡಿ ಮಗನ ಕಣ್ಣೆದುರೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ತಿರುವನಂತಪುರಂನಿಂದ 20 ಕಿಲೋ ಮೀಟರ್ ದೂರದಲ್ಲಿರುವ ಕಠಿಣಂಕುಳಂನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪತಿ ಹಾಗೂ ಆತನ ಮೂವರು ಗೆಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯ ಹೇಳಿಕೆ ಪ್ರಕಾರ, ಗುರುವಾರ ಸಂಜೆ ಕಡಲ ತೀರ ಪ್ರದೇಶದಲ್ಲಿರುವ ಗೆಳೆಯನ ಮನೆಗೆ ಪತ್ನಿ ಮತ್ತು ತನ್ನಿಬ್ಬರ ಮಕ್ಕಳನ್ನು ಪತಿ ಕರೆದೊಯ್ದಿದ್ದ. ಈ ಸಂದರ್ಭದಲ್ಲಿ ಆಕೆಗೆ ಬಲವಂತವಾಗಿ ಮದ್ಯವನ್ನು ಕುಡಿಸಿ, ನಂತರ ನಾಲ್ವರು ಆಕೆಯನ್ನು ಪೊದೆ ತುಂಬಿದ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು.

ಸಂತ್ರಸ್ತೆಯ ಹಿರಿಮ ಮಗ (ಐದು ವರ್ಷ) ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಸಂತ್ರಸ್ತೆ ನಂತರ ಮಗನ ಅಳುವಿನ ಶಬ್ದ ಕೇಳಿ ಎಚ್ಚೆತ್ತುಕೊಂಡಿರುವುದಾಗಿ ತಿಳಿಸಿದ್ದಾಳೆ. ಕಿರಿಯ ಮಗನನ್ನು ಪತಿ ಕರೆದೊಯ್ದಿದ್ದ. ಇದಾದ ನಂತರ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ಯುವಕರ ನೆರವಿನೊಂದಿಗೆ ಮನೆಗೆ ಸೇರಿದ್ದಳು.

ಕೊನೆಗೆ ಮನೆಗೆ ಬಂದ ಪತಿ ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಪೊಲೀಸರಿಗೆ ದೂರು ನೀಡಬಾರದು ಎಂದು ಪತ್ನಿಗೆ ಬೆದರಿಕೆ ಹಾಕಿದ್ದ. ಆದರೆ ಅದನ್ನು ಒಪ್ಪದ ಸಂತ್ರಸ್ತೆ ದೂರು ನೀಡಿದ್ದಳು. ಅಂದು ಸಂಜೆ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪತಿ ಹಾಗೂ ಇತರ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Comments are closed.