ರಾಷ್ಟ್ರೀಯ

ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ 700 ರೂ ದಂಡ ವಿಧಿಸಿದ ಸಂಚಾರಿ ಪೊಲೀಸರು; ಸಿಟ್ಟುಗೊಂಡ ಯುವಕನಿಂದ ಬೈಕ್‌ಗೆ ಬೆಂಕಿ

Pinterest LinkedIn Tumblr

ಜಮ್‍ಶೆಡ್‍ಪುರ: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಚಾರಿ ಪೊಲೀಸರು 700 ರೂ ದಂಡವನ್ನು ವಿಧಿಸಿದ ನಂತರ ಯುವಕನೊಬ್ಬ ತನ್ನ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ.

ಮಾಂಗೋ ಚೌಕ್‌ನಲ್ಲಿ ಈ ಘಟನೆ ನಡೆದಿದ್ದು, ತನ್ನ ಬೈಕ್‌ಗೆ ಎಲ್ಲ ಅಗತ್ಯ ದಾಖಲೆಗಳಿದ್ದರೂ ಸಂಚಾರಿ ಪೊಲೀಸರು 700 ರೂ.ದಂಡ ವಿಧಿಸಿದ್ದಾರೆ ಎಂದು ಯುವಕ ದೂರಿದ್ದಾನೆ. ತಾನು ಹೆಲ್ಮೆಟ್ ಮತ್ತು ಮುಖವಾಡ ಧರಿಸಿದ್ದರೂ ಸಹ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಯುವಕ ಅಳಲು ತೋಡಿಕೊಂಡಿದ್ದಾನೆ.

ಬೈಕ್‍ಗೆ ಬೆಂಕಿ ಇಟ್ಟ ಯುವಕನನ್ನು ರಾಜೇಂದ್ರ ಸಿಂಗ್ ಎಂದು ಗುರುತಿಸಲಾಗಿದ್ದು ಈತ ನ್ಯೂ ಕುಮ್ರೂಪ್ ಬಸ್ತಿ ಮೂಲದವನಾಗಿದ್ದಾನೆ.

Comments are closed.