ಅಝಾಮ್‌ಗಢ್: ವಾಹನ, ಮನೆ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟ ಮಾಡುವುದನ್ನು ನೋಡಿದ್ದೇವೆ. ಆದರೆ, ಉತ್ತರ ಪ್ರದೇಶದಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿಯನ್ನೇ ಸೋಶಿಯಲ್ ಮೀಡಿಯಾದಲ್ಲಿ ಮಾರಾಟಕ್ಕೆ ಇಟ್ಟಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಹೌದು, ಉತ್ತರ ಪ್ರದೇಶದ ಥುತಿಯಾ ಗ್ರಾಮದ ಪುನೀತ್ ಎಂಬ ವ್ಯಕ್ತಿಯು ತನ್ನ ಅಳಿಯಂದಿರಿಂದ ಮೋಟರ್ ಸೈಕಲ್ ಬೇಡಿಕೆ ಈಡೇರದ ಕಾರಣಕ್ಕಾಗಿ ತನ್ನ ಹೆಂಡತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ” ಗೌರವಯುತ ಮಾರಾಟ” ಎಂಬ ಶೀರ್ಷಿಕೆಯಲ್ಲಿ ಮಾರಾಟಕ್ಕೆ ಮುಂದಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮೆಹ್ನಗರ ಪೊಲೀಸ್ ವಲಯದ ಥುತಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪುನೀತ್ ಮೋಟಾರ್ ಸೈಕಲ್‌ಗಾಗಿ ಪ್ರತಿನಿತ್ಯ ತನ್ನ ಹೆಂಡತಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಆಗಾಗ್ಗೆ ಆಕೆಯನ್ನು ಥಳಿಸುತ್ತಿದ್ದ. ಇದರಿಂದ ಬೇಸತ್ತ ಪತ್ನಿಯು ಕೊಟ್ವಾಲಿ ಪೊಲೀಸ್ ವಲಯದಲ್ಲಿ ಬರುವ ತನ್ನ ತವರು ಮನೆಗೆ ಮರಳಿದ್ದರು.
ಇದರಿಂದ ಮತ್ತಷ್ಟು ಕೋಪಗೊಂಡ ಪುನೀತ್, ತನ್ನ ಹೆಂಡತಿಯ ಫೋಟೊವನ್ನು ತನ್ನ ಫೋನ್ ಸಂಖ್ಯೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದನು ಮತ್ತು ಅವಳೊಂದಿಗೆ ಮಾತನಾಡಲು ಹಾಗೂ ಪಡೆಯಲು ಹಣವನ್ನು ಪಾವತಿಸುವಂತೆ ಜನರಿಗೆ ಬೇಡಿಕೆ ಇಟ್ಟಿದ್ದನು.
ಮಹಿಳೆ ತನ್ನ ಮೊಬೈಲ್ ಫೋನ್‌ನಲ್ಲಿಅನಧೀಕೃತ ಕರೆಗಳು ಬರಲು ಪ್ರಾರಂಭಿಸುತ್ತಿದ್ದಂತೆ, ಆಕೆ ಸೈಬರ್ ಸೆಲ್‌ಗೆ ದೂರು ನೀಡಿದ್ದಳು ಹಾಗೂ ತನ್ನ ಗಂಡನನ್ನು ಆರೋಪಿ ಎಂದು ಹೆಸರಿಸಿದ್ದಳು.
” ಸೋಮವಾರ ಪುನೀತ್‌ನನ್ನು ಬಂಧಿಸಿದ್ದೇವೆ ಮತ್ತು ಆತನನ್ನು ಜೈಲಿಗೆ ಕಳುಹಿಸಲಾಗಿದೆ. ಇದು ಮಹಿಳೆಯರ ಮೇಲಿನ ಅಪರಾಧದ ಅಸಾಮಾನ್ಯ ಪ್ರಕರಣವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವುದನ್ನು ನಾವು ಖಚಿತಪಡಿಸುತ್ತೇವೆ,”ಎಂದು ಎಸ್‌ಪಿ ಕಚೇರಿಯಲ್ಲಿ ಪ್ರೊ ಸಂಜಯ್ ಸಿಂಗ್ ಹೇಳಿದ್ದಾರೆ.
Comments are closed.