ರಾಷ್ಟ್ರೀಯ

ಆನ್‌ಲೈನ್ ಕ್ಲಾಸ್‌ ಮಿಸ್ ಆಗಿದಕ್ಕೆ 9 ನೇ ತರಗತಿಯ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

Pinterest LinkedIn Tumblr

ಮಲಪುರಂ: ಶಾಲೆಯಿಂದ ನೀಡುವ ಆನ್‌ಲೈನ್ ಕ್ಲಾಸ್‌ ಮಿಸ್ ಆಗಿದಕ್ಕೆ 9 ನೇ ತರಗತಿಯ ವಿದ್ಯಾರ್ಥಿನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಮಲಪುರಂ ಜಿಲ್ಲೆಯ ವಲಂಚೇರಿಯಲ್ಲಿ ನಡೆದಿದೆ. ಆನ್‌ಲೈನ್‌ ತರಗತಿಗೆ ಹಾಜರಾಗಲು ಮನೆಯಲ್ಲಿ ಟಿವಿ ಹಾಗೂ ಸ್ಮಾರ್ಟ್‌ ಫೋನ್‌ ಇಲ್ಲ ಎನ್ನುವುದೇ ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ಕೇರಳದಲ್ಲಿ ಟಿವಿ ಹಾಗೂ ಫೋನ್‌ಗಳ ಮೂಲಕ ಆನ್‌ಲೈನ್‌ ಕ್ಲಾಸ್‌ಗಳು ನಡೆಯುತ್ತಿದೆ. ಆದ್ರೆ ಮನೆಯಲ್ಲಿ ಟಿವಿ, ಸ್ಮಾರ್ಟ್‌ ಫೋನ್ ಇಲ್ಲದ ಹಿನ್ನೆಲೆ 14 ವರ್ಷದ ದೇವಿಕಾ ಬಾಲಕೃಷ್ಣನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿನ್ನೆ ಸಂಜೆಯಿಂದ ಬಾಲಕಿ ಕಾಣಿಸದ ಹಿನ್ನೆಲೆ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಪಕ್ಕದಲ್ಲಿನ ಜಾಗದಲ್ಲಿ ಸುಟ್ಟ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್‌ ನೋಟ್‌ ಕೂಡ ಸಿಕ್ಕಿದ್ದು ‘ನಾನು ಹೋಗುತ್ತಿದ್ದೇನೆ’ ಎಂದು ಬಾಲಕಿ ಬರೆದಿರುವುದಾಗಿ ತಿಳಿದುಬಂದಿದೆ. ಇನ್ನು ‘ಆನ್‌ಲೈನ್‌ ಕ್ಲಾಸ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮಗಳು ತುಂಬಾನೇ ನೋವುಪಟ್ಟುಕೊಂಡಿದ್ದಳು’. ತರಗತಿಗಳು ಮಿಸ್‌ ಆಗುವುದರಿಂದ ಸಮಸ್ಯೆಯಾಗುತ್ತದೆ ಎಂದು ತಂದೆ ಬಾಲಕೃಷ್ಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಮಗಳು ಟಿವಿ ರಿಪೇರ್‌ ಮಾಡುವಂತೆ ದಿನ ನಿತ್ಯ ಕೇಳಿಕೊಂಡಿದ್ದಳು. ಆದ್ರೆ ಅನಾರೋಗ್ಯ ಹಿನ್ನೆಲೆ ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಬಳಿ ದುಡ್ಡು ಕೂಡ ಇರಲಿಲ್ಲ.

ಆದ್ರೆ ಮಗಳು ಈ ರೀತಿ ಮಾಡುತ್ತಾಳೆ ಎಂದು ನಾವು ಊಹಿಸಿರಲಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ರವೀಂದ್ರ ನಾಥ್‌, ನಾವು ಸರ್ವೇ ನಡೆಸಿದ ನಂತರವೇ ಆನ್‌ಲೈನ್‌ ಶಿಕ್ಷಣ ಆರಂಭಿಸಿದ್ದೇವೆ. ಟಿವಿ ಹಾಗೂ ಫೋನ್‌ ಮೂಲಕ ಶಿಕ್ಷಣ ನೀಡುತ್ತಿದ್ದೇವೆ. ಟಿವಿಯಲ್ಲಿ ಎರಡೆರಡು ಬಾರಿ ರೀ ಟೆಲಿಕಾಸ್ಟ್‌ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ 1 ರಿಂದ 12ನೇ ತರಗತಿ ವರೆಗೆ ಶಿಕ್ಷಣ ಇಲಾಖೆ ಟಿವಿ ಮೂಲಕ ಕ್ಲಾಸ್‌ ನೀಡುತ್ತಿದೆ. ವಿಕ್ಟೆರ್ಸ್‌ ಚಾನೆಲ್‌ ಮೂಲಕ 30 ನಿಮಿಷಗಳ ಕಾಲ ಆಯಾ ತರಗತಿಗೆ ಸಂಬಂಧಪಟ್ಟ ಕ್ಲಾಸ್‌ ನೀಡಲಾಗುತ್ತಿದೆ.

Comments are closed.