ರಾಷ್ಟ್ರೀಯ

ವೆಂಟಿಲೇಟರ್‌ ತಯಾರಿಸಲು ಮೂರು ಭಾರತೀಯ ಕಂಪನಿಗಳಿಗೆ ನಾಸಾದಿಂದ ಪರವಾನಗಿ

Pinterest LinkedIn Tumblr

ವಾಷಿಂಗಟನ್: ನಿರ್ಣಾಯಕ ಕೋವಿಡ್ 19 ರೋಗಿಗಳಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವೆಂಟಿಲೇಟರ್‌ಗಳನ್ನು ತಯಾರಿಸಲು ಮೂರು ಭಾರತೀಯ ಕಂಪನಿಗಳು ನಾಸಾದಿಂದ ಪರವಾನಗಿ ಪಡೆದಿವೆ.

ಮೂರು ಭಾರತೀಯ ಕಂಪನಿಗಳಾದ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಭಾರತ್ ಫೊರ್ಜ್ ಲಿಮಿಟೆಡ್ ಮತ್ತು ಮೇಧಾ ಸರ್ವೋ ಡ್ರೈವ್ಸ್ ಪ್ರೈವೇಟ್ ಲಿಮಿಟೆಡ್ ಗಳಿಗೆ ವೆಂಟಿಲೇಟರ್‌ಗಳನ್ನು ತಯಾರಿಸಲು ನಾಸಾದಿಂದ ಪರವಾನಗಿ ನೀಡಿರುವುದಾಗಿ ಬಾಹ್ಯಾಕಾಶ ಸಂಸ್ಥೆ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಉಸಿರಾಟ ಸರಾಗಗೊಳಿಸುವ ವೆಂಟಿಲೇಟರ್‌ಗಳನ್ನು ತಯಾರಿಸಲು ಭಾರತೀಯ ಸಂಸ್ಥೆಗಳಲ್ಲದೆ, ಎಂಟು ಅಮೆರಿಕನ್ ಮತ್ತು ಮೂರು ಬ್ರೆಜಿಲಿಯನ್ ಸೇರಿದಂತೆ 18 ಇತರ ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ.

ಅಮೆರಿಕಾದಲ್ಲಿ ಬಾಹ್ಯಾಕಾಶ ಸಂಶೋಧನೆ, ಏರೋನಾಟಿಕ್ಸ್ ಮತ್ತು ಸಂಬಂಧಿತ ಕಾರ್ಯಕ್ರಮಗಳಿಗೆ ಹೆಸರಾದ ಸ್ವತಂತ್ರ ಏಜನ್ಸಿ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ದಕ್ಷಿಣ ಕ್ಯಾಲಿಫೋರ್ನಿಯಾದ ತನ್ನ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ (ಜೆಎಲ್ಪಿ) ಕರೋನವೈರಸ್ ರೋಗಿಗಳಿಗೆ ಮೀಸಲಾದ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಜೆಪಿಎಲ್ ಎಂಜಿನಿಯರ್‌ಗಳು ವಿಟಾಲ್ ಎಂದು ಕರೆಯಲ್ಪಡುವ ವಿಶೇಷ ವೆಂಟಿಲೇಟರ್ ಅನ್ನು ಒಂದು ತಿಂಗಳಲ್ಲಿ ವಿನ್ಯಾಸಗೊಳಿಸಿದ್ದು ಏಪ್ರಿಲ್ 30 ರಂದು ಆಹಾರ ಮತ್ತು ಔಷಧ ಆಡಳಿತದಿಂದ ‘ತುರ್ತು ಬಳಕೆ ಅಧಿಕಾರ’ ಪಡೆದರು. ವಿಟಾಲ್ಉಪಕರಣಗಳು ಸಾಂಪ್ರದಾಯಿಕ ವೆಂಟಿಲೇಟರ್‌ನ ಏಳನೇ ಒಂದು ಭಾಗವನ್ನು ಬಳಕೆ ಮಾಡಲಿದ್ದು ಈಗಾಗಲೇ ಸರಬರಾಜು ಸರಣಿಯಲ್ಲಿ ಲಭ್ಯವಿರುವ ಭಾಗಗಳನ್ನು ಇದು ಅವಲಂಬಿಸಿದೆ.

Comments are closed.