ರಾಷ್ಟ್ರೀಯ

ಏಕಕಾಲಕ್ಕೆ 8 ಜನರಿಗೆ ವಾಯ್ಸ್ ಕಾಲ್ ಸೌಲಭ್ಯದ CatchUP ಬಿಡುಗಡೆ ಮಾಡಿದ Facebook

Pinterest LinkedIn Tumblr


ನವದೆಹಲಿ: ಫೇಸ್‌ಬುಕ್‌ನ ಆಂತರಿಕ ಸಂಶೋಧನೆ ಮತ್ತು ಅಭಿವೃದ್ಧಿ ತಂಡ (NPE), ಕ್ಯಾಚ್‌ಅಪ್ ಹೆಸರಿನ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಇದರಿಂದ ಬಳಕೆದಾರರು ತಮ್ಮ ಬಂಧು-ಸೇರಿದಂತೆ ಏಕಕಾಲಕ್ಕೆ ಒಟ್ಟು 8 ಜನರನ್ನು ಗ್ರೂಪ್ ಕರೆ ಮೂಲಕ ಸಂಪರ್ಕ ಸಾಧಿಸಬಹುದು. ಆದರೆ, ಸದ್ಯ ಇದನ್ನು ಅಮೆರಿಕಾದ ಬಳಕೆದಾರರಿಗೆ ಮಾತ್ರ ನೀಡಲಾಗಿದೆ. ಹಲವಾರು ಗ್ರೂಪ್ ಚಾಟ್ ಆಪ್ ಗಳಿರುವ ಇಂದಿನ ಕಾಲದಲ್ಲಿ ಈ ಆಪ್ ಬಿಡುಗಡೆಗೊಳಿಸಲಾಗಿದ್ದು, ಇದರ ವಿಶೇಷತೆ ಎಂದರೆ ನಿಮ್ಮ ಬಂಧು-ಮಿತ್ರರು ಚಾಟ್ ಮಾಡಲು ಸಿದ್ಧರಿದ್ದಾಗ ಇದು ನಿಮಗೆ ಸೂಚನೆ ನೀಡುತ್ತದೆ.

ಫೇಸ್ ಬುಕ್ ಖಾತೆ ಹೊಂದಿರುವ ಅವಶ್ಯಕತೆ ಇಲ್ಲ
ಈ ಆಪ್ ಬಳಸಲು ನೀವು ಫೇಸ್ ಬುಕ್ ಖಾತೆ ಹೊಂದಿರುವ ಅನಿವಾರ್ಯತೆ ಇಲ್ಲ. ನಿಮ್ಮ ಫೋನ್ ಗಳಲ್ಲಿನ ಸಂಪರ್ಕಗಳ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಈ ಆಪ್ ಹೌಸ್ ಪಾರ್ಟಿ ಅಪ್ಲಿಕೇಶನ್ ಗೆ ಹೋಲುವ ವೈಶಿಷ್ಟ್ಯಹೊಂದಿದೆ. ಅಂದರೆ, ಇದರಲ್ಲಿ ಬಳಕೆದಾರರು ಆಪ್ ನಲ್ಲಿ ತಮ್ಮ ಸ್ಟೇಟಸ್ ಹಾಕುವ ಮೂಲಕ ನಾವು ಚಾಟ್ ಗೆ ಸಿದ್ಧರಾಗಿದ್ದೆವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸಬಹುದು. ಇದೆ ರೀತಿ ಸ್ಕ್ರೀನ್ ನ ಮೇಲ್ಭಾಗದಲ್ಲಿ ರೆಡಿ ಫಾರ್ ಚಾಟ್ ಡಿಸ್ಪ್ಲೇ ಮಾಡಬಹುದು. ಇದರ ಕೆಳಗಡೆ ಆಫ್ಲೈನ್ ಬಳಕೆದಾರರು ಹಾಗೂ ಇತರ ಕಾಂಟ್ಯಾಕ್ಟ್ ಗಳನ್ನು ಕೂಡ ನೀಡಲಾಗಿದೆ.

ಸದ್ಯದ ವ್ಯಸ್ತ ಜೀವನದಲ್ಲಿ ಜನರು ಫೋನ್ ಕಾಲ್ ಗಳ ಬಳಕೆ ಕಡಿಮೆ ಮಾಡುತ್ತಿರುವ ಕಾರಣ ಈ ಆಪ್ ಸಿದ್ಧಪಡಿಸಲಾಗಿದೆ ಎಂದು ಫೇಸ್ ಬುಕ್ ಹೇಳಿದೆ. ಫೇಸ್ ಬುಕ್ ಪ್ರಕಾರ ಯಾವುದೇ ಓರ್ವ ಬಳಕೆದಾರನಿಗೆ ಬೇರೆ ಬಳಕೆದಾರ ಯಾವಾಗ ಫ್ರೀ ಆಗಿರುತ್ತಾನೆ ಎಂಬುದು ತಿಳಿಯದಿರುವ ಕಾರಣ ಈ ರೀತಿ ಆಗುತ್ತದೆ. ಅಷ್ಟೇ ಅಲ್ಲ ಉತ್ತರಿಸಲಾಗದ ಕಾಲ್ ಗಳು ವೈಸ್ ಮೇಲ್ ರೂಪದಲ್ಲಿ ಹೋಗುತ್ತವೆ.

ಕಾಲ್ ಮಾಡಲು ಫ್ರೀ ಆಗಿ ಇರುವ ಜನರ ಪತ್ತೆ ಹಚ್ಚಬಹುದು
ಈ ಆಪ್ ನಲ್ಲಿ ಯಾವ ವ್ಯಕ್ತಿ ಮಾತುಕತೆ ಮಾಡಲು ಸಿದ್ಧರಿದ್ದಾರೆ ಎಂಬುದು ತಿಳಿಯುತ್ತದೆ. ಜೊತೆಗೆ ಬೇರೆ ಚಾಟ್ ಅಪ್ಲಿಕೇಶನ್ ರೀತಿಯೇ ಇದರಲ್ಲಿಯೂ ಕೂಡ ಸ್ನೇಹಿತರು, ಕುಟುಂಬಸ್ಥರ ಹಾಗೂ ಸಹಪಾಟಿಗಳ ಕಾಂಟಾಕ್ಟ್ ಗಳ ಗ್ರೂಪ್ ತಯಾರಿಸಬಹುದು.

Comments are closed.