ರಾಷ್ಟ್ರೀಯ

ಜೂ.1ರಂದು ಕೇರಳಕ್ಕೆ ಮಾನ್ಸೂನ್: 5 ದಿನ ಮುಂಚೆಯೇ ಮುಂಗಾರು ಆರಂಭ!

Pinterest LinkedIn Tumblr


ಕೊಚ್ಚಿ: ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ಅಂಫಾನ್ ಚಂಡಮಾರುತದಿಂದ ಮಾನ್ಸೂನ್‌ ಮಾರುತಗಳ ಚಲನೆಗೆ ಕೆಲ ದಿನಗಳ ಕಾಲ ತಡೆ ಉಂಟಾಗಿತ್ತು. ಇದೀಗ ಮತ್ತೆ ನೈರುತ್ಯ ಮಾರುತಗಳು ಕೇರಳ ತೀರದತ್ತ ಪಯಣ ಮುಂದುವರಿಸಿವೆ.

ಜೂನ್ 1ರ ವೇಳೆಗೆ ಮಾನ್ಸೂನ್‌ ಮಾರುತಗಳು ಕೇರಳ ತೀರ ಪ್ರವೇಶಿಸಲಿವೆ. ಮೇ 31ರಿಂದ ಜೂನ್‌ 4ರವರೆಗೆ ನೈರುತ್ಯ ಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಲಿದೆ. ಇದರಿಂದ ಮುಂಗಾರು ಮಳೆ ತರುವ ಮಾನ್ಸೂನ್‌ ಮಾರುತಗಳಗಳ ಚಲನೆ ತಡೆರಹಿತವಾಗಲಿದೆ ಎಂದು ಹವಾಮಾನ ಇಲಾಖೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ನೈರುತ್ಯ ಮಾರುತಗಳು ಗುರುವಾರದಂದು ಮಾಲ್ಡೀವ್ಸ್‌ನ ಕೊಮೊರಿನ್ ಪ್ರದೇಶ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಬಳಿಗೆ ಪ್ರವೇಶಿಸಿವೆ. ಮುಂದಿನ 48 ಗಂಟೆಗಳಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಮಾನ್ಸೂನ್‌ ಮಾರುತಗಳು ಆಗ್ನೇಯ ದಿಕ್ಕಿಗೆ ಚಲಿಸಲಿದ್ದು, ಮುಂದಿನ ಮೂರು ದಿನಗಳಲ್ಲಿದಕ್ಷಿಣ ಒಮಾನ್ ಮತ್ತು ಪೂರ್ವ ಯೆಮನ್‌ ತೀರ ತಲುಪಲಿವೆ ಎಂದು ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.

ಮೀನುಗಾರರಿಗೆ ಎಚ್ಚರಿಕೆ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯುವ ಮೀನುಗಾರರು ಮೇ 29ರಿಂದ ಜೂನ್‌ 4ರವೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

5 ದಿನ ಮೊದಲೇ ಮುಂಗಾರು ಪ್ರವೇಶ:
ಈ ಮೊದಲು ಜೂನ್‌ 6ಕ್ಕೆ (4 ದಿನ ಮುಂಚೆ ಅಥವಾ 4 ದಿನ ತಡವಾಗಿ) ಮುಂಗಾರು ಮಾರುತಗಳು ಭಾರತ ಪ್ರವೇಶಿಸಲಿವೆ ಎಂದು ಮುನ್ಸೂಚನೆ ನೀಡಿತ್ತು. ಇದೀಗ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಏರ್ಪಡುವುದರಿಂದರಿಂದ, 5 ದಿನ ಮುಂಚಿತವಾಗಿಯೇ ಮಾನ್ಸೂನ್‌ ಮಾರುತಗಳು ಕೇರಳ ತೀರ ತಲುಪಲಿವೆ.

Comments are closed.