ರಾಷ್ಟ್ರೀಯ

ಭಾರತೀಯ ಸೇನೆಯಿಂದ ಎರಡನೇ ಸ್ಕ್ವಾಡ್ರನ್ ಅಭಿವೃದ್ಧಿ

Pinterest LinkedIn Tumblr


ನವ ದೆಹಲಿ; ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನದಿಂದ ನಿರ್ಮಿಸಲಾದ ತೇಜಸ್ ಎಂಬ ಯುದ್ಧ ವಿಮಾನ ಭಾರತದ ವಾಯುಸೇನೆಯನ್ನು ಸೇರಿ ಸೇನೆಯ ಕೈ ಬಲಪಡಿಸಿದ್ದು ಹಳೆಯ ಸುದ್ದಿ. ಇದೀಗ ಎರಡನೇ ಬೃಹತ್ ನಂ.18 ಸ್ಕ್ವಾಡ್ರನ್‌ ನನ್ನು ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗುತ್ತಿರುವುದು ವಿಶೇಷ.

ಭಾರತೀಯ ವಾಯು ಸೇನೆಯ ಮುಖ್ಯಸ್ಥ ಇಂದು ಶಸ್ತ್ರಸಜ್ಜಿತವಾದ ನೂತನ ತೇಜಸ್ ವಾಯುನೆಲೆಯನ್ನು ಭಾರತೀಯ ಸೇನೆಗೆ ಸಮರ್ಪಿಸಿದ್ದಾರೆ. ಭಾರತ ಚೀನಾ ಗಡಿಯಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಇಂದಿನ ದಿನಮಾನಗಳಲ್ಲಿ ಸಹಸ್ರಾರು ಫೈಟರ್‌ ಜೆಟ್‌ಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ಸ್ವದೇಶಿ ನಿರ್ಮಿತ ತೇಜಸ್ ಸ್ಕ್ವಾಡ್ರನ್‌ ಮಹತ್ವದ ಪಾತ್ರ ನಿರ್ವಹಿಸಲಿದೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಈ ನೂತನ ತೇಜಸ್ ಯುದ್ಧ ವಿಮಾನಗಳು ಮತ್ತು ಸ್ಕ್ವಾಡ್ರನ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಮಹತ್ವದ ಅಂಶಗಳು ಈ ಕೆಳಗಿನಂತಿವೆ.

1)1971 ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದಲ್ಲಿ ಮೊದಲ ತೇಜಸ್ ಸ್ಕ್ವಾಡ್ರನ್ (Squadron)ಭಾಗವಹಿಸಿತ್ತು ಮತ್ತು ಈ ಗೆಲುವಿಗಾಗಿ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮ್ ವೀರ್‌ ಚಕ್ರವನ್ನು ಪಡೆದಿತ್ತು.

2) ನಂ .45 ವಾಯುನೆಲೆಯ ‘ಫ್ಲೈಯಿಂಗ್ ಡಾಗರ್ಸ್’ ತೇಜಸ್ ಫೈಟರ್ ಜೆಟ್‌ಗಳಿಂದ ಶಸ್ತ್ರಸಜ್ಜಿತವಾಗಿ ಸಿದ್ಧಗೊಂಡ ಮೊದಲ ವಾಯುನೆಲೆ

3) ನಂ.18 ಸ್ಕ್ವಾಡ್ರನ್ ಅನ್ನು “ಫ್ಲೈಯಿಂಗ್ ಬುಲೆಟ್ಸ್” ಎಂದು ಕರೆಯಲಾಗುತ್ತದೆ4)ಇದು ತೇಜಸ್‌ನ ಎರಡು ಸ್ಕ್ವಾಡ್ರನ್‌ಗಳನ್ನು ನಿರ್ವಹಿಸುವ ದೇಶದ ಏಕೈಕ ವಾಯುನೆಲೆಯಾಗಿದೆ.

5) ತ್ವರಿತ ಮತ್ತು ನಿರ್ಭೀತ ಎಂಬ ಧ್ಯೇಯವಾಕ್ಯದೊಂದಿಗೆ ಮೊದಲ ಸ್ಕ್ವಾಡ್ರನ್ ಅನ್ನು ಏಪ್ರಿಲ್ 15, 1965 ರಂದು ರಚಿಸಲಾಯಿತು.

ತೇಜಸ್‌ ಕುರಿತು ಮಾಹಿತಿ.
6) ಈ ಸ್ಕ್ವಾಡ್ರನ್ ಶ್ರೀನಗರದಲ್ಲಿ ಮೊದಲ ಬಾರಿಗೆ ಇಳಿಯುವ ಮತ್ತು ಕಾರ್ಯನಿರ್ವಹಿಸುವ ಮೂಲಕ ‘ಕಾಶ್ಮೀರ ಕಣಿವೆಯ ರಕ್ಷಕರು’ ಎಂಬ ಹೆಸರು ಗಳಿಸಿತ್ತು.

7)2015 ರ ನವೆಂಬರ್‌ನಲ್ಲಿ ಈ ಸ್ಕ್ವಾಡ್ರನ್‌ಗೆ ಪ್ರತಿಷ್ಠಿತ ಅಧ್ಯಕ್ಷರ ಮಾನದಂಡವನ್ನು ನೀಡಲಾಯಿತು.

8) ನಂ. 45 ಸ್ಕ್ವಾಡ್ರನ್‌ನಲ್ಲಿ ಸೇರ್ಪಡೆಗೊಂಡ ನಂತರ 2016 ರಲ್ಲಿ ತೇಜಸ್ ಭಾರತೀಯ ವಾಯುಸೇನೆಯ ಭಾಗವಾಯಿತು.

9)ನಾಲ್ಕನೇ ತಲೆಮಾರಿನ ಯುದ್ಧ ವಿಮಾನವನ್ನು ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.

ಸಾಮಾನ್ಯವಾಗಿ ತೇಜಸ್‌ ಅತ್ಯಂತ ವೇಗವಾಗಿ ಚಲಿಸುವ ಲಘು ಯುದ್ಧನೌಕೆಗಳು. ಇದನ್ನು ದೇಶೀಯ ತಂತ್ರಜ್ಞಾನದಲ್ಲೇ ತಯಾರಿಸಲಾಗಿದ್ದು, ಲೇಸರ್-ನಿರ್ದೇಶಿತ ಬಾಂಬುಗಳಂತಹ ನಿಖರ-ನಿರ್ದೇಶಿತ ಶಸ್ತ್ರಾಸ್ತ್ರಗಳನ್ನು ಇದಕ್ಕೆ ಅಳವಡಿಸಲಾಗಿದೆ. ಈ ವಿಮಾನಗಳು ಮಾರ್ಗದರ್ಶನವಿಲ್ಲದೆಯೂ ಬಾಂಬ್‌ಗಳನ್ನು ಬೀಳಿಸುವ ಸಾಮರ್ಥ್ಯವನ್ನೂ ಹೊಂದಿವೆ.

ಇಂತಹ ಶಕ್ತಿಯುತವಾದ ಹತ್ತಾರು ಫೈಟರ್‌ ಜೆಟ್‌ಗಳನ್ನು ನಿಲ್ಲಿಸುವ ನಂ.18 ಸ್ಕ್ವಾಡರ್ನ್‌ ವಿಶ್ವದ ರಕ್ಷಣಾ ವ್ಯವಸ್ಥೆಯಲ್ಲಿ ಭಾರತದ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿರುವುದರಲ್ಲಿ ಯಾವುದೇ ಸಂಶಯ ಇಲ್ಲ ಎನ್ನಲಾಗುತ್ತಿದೆ.

Comments are closed.