ರಾಷ್ಟ್ರೀಯ

ಹಿಮಾಚಲ ಪ್ರದೇಶದಿಂದ ಜೂನ್‌ 30ರವರೆಗೂ ಲಾಕ್‌ಡೌನ್‌ ವಿಸ್ತರಣೆ

Pinterest LinkedIn Tumblr


ಶಿಮ್ಲಾ: ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಹಿಮಾಚಲ ಪ್ರದೇಶ ಸರಕಾರ ಲಾಕ್‌ಡೌನ್‌ನ್ನು ಮತ್ತೆ 5 ವಾರಗಳ ಕಾಲ ವಿಸ್ತರಿಸಿದೆ. ಮುಖ್ಯಮಂತ್ರಿ ಜೈ ರಾಮ್‌ ಠಾಕೂರ್‌ ನೇತೃತ್ವದ ಬಿಜೆಪಿ ಸರಕಾರ ಈ ನಿರ್ಣಯ ಕೈಗೊಂಡಿದ್ದು, ಜೂನ್‌ 30ರವರೆಗೂ 12 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರೆಯಲಿದೆ ಎಂದಿದ್ದಾರೆ.

ಇದುವರೆಗೂ ಹಿಮಾಚಲ ಪ್ರದೇಶದಲ್ಲಿ 214 ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 63 ಸೋಂಕಿತರು ಗುಣಮುಖರಾಗಿದ್ದರೆ, ಐದು ಜನ ಸಾವನ್ನಪ್ಪಿದ್ದಾರೆ. ಹಮ್ರೀಪುರ್‌ ಜಿಲ್ಲೆಯಲ್ಲಿ ಹಿಮಾಚಲ ಪ್ರದೇಶದ ನಾಲ್ಕನೇ ಒಂದು ಭಾಗದಷ್ಟು ಸೋಂಕಿತರು ಪತ್ತೆಯಾಗಿದ್ದಾರೆ.

ಹಮ್ರೀಪುರ್‌ ಜಿಲ್ಲೆಯಲ್ಲಿ ಇದುವರೆಗೂ 63 ಪಾಸಿಟಿವ್‌ ಪ್ರಕರಣಗಳು ಕಂಡುಬಂದಿದ್ದು, ಸೋಲನ್‌ ಜಿಲ್ಲೆಯಲ್ಲಿ 21 ಸೋಂಕಿತರು ಪತ್ತೆಯಾಗಿದ್ದಾರೆ. ದೇಶವ್ಯಾಪಿ ಲಾಕ್‌ಡೌನ್‌ ಸಡಿಲಗೊಳಿಸಿದ್ದು, ಕೇಂದ್ರ ವಿಮಾನಯಾನವನ್ನು ಮರಳಿ ಪ್ರಾರಂಭಿಸಿರುವಾಗ ಹಿಮಾಚಲ ಪ್ರದೇಶ ಸರಕಾರ ಲಾಕ್‌ಡೌನ್‌ ವಿಸ್ತರಣೆಯ ನಿರ್ಧಾರವನ್ನು ಕೈಗೊಂಡಿದೆ.

ಮೇ 31ರವರೆಗೆ ದೇಶವ್ಯಾಪಿ ಲಾಕ್‌ಡೌನ್‌ ಜಾರಿಯಲ್ಲಿದೆ. ಮಾರ್ಚ್‌ 25 ರಿಂದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಲಾಕ್‌ಡೌನ್‌ ಈಗಾಗಲೇ 3 ಬಾರಿ ವಿಸ್ತರಣೆಯಾಗಿದ್ದು, ಈ 31ಕ್ಕೆ ಸಂಪೂರ್ಣ ಲಾಕ್‌ಡೌನ್‌ ಅಂತ್ಯಗೊಳಿಸುವ ಸಾಧ್ಯತೆ ಇದೆ. ಈಗಾಗಲೇ ಹಂತ ಹಂತವಾಗಿ ವಿಮಾನಯಾನ, ಬಸ್‌ ಸಂಚಾರ, ರೈಲ್ವೇ ಸಂಚಾರವನ್ನು ಕೇಂದ್ರ ಸರಕಾರಆರಂಭಿಸಿರುವುದು ಲಾಕ್‌ಡೌನ್‌ ವಿಸ್ತರಣೆಯ ಸಾಧ್ಯತೆಯನ್ನು ಕ್ಷೀಣವಾಗಿಸಿದೆ.

ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಲಾಕ್‌ಡೌನ್‌ ವಿಸ್ತರಣೆಗೆ ಹಿಮಾಚಲ ಪ್ರದೇಶ ಸಿಎಂ ಬೆಂಬಲ ನೀಡಿದ್ದರು. ಇದರ ಜೊತೆ ಹಸಿರು ವಲಯ ಹಾಗೂ ಆರೇಂಜ್‌ ಝೋನ್‌ಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಮರು ಪ್ರಾರಂಭಿಸುವ ಬಗ್ಗೆಯೂ ಜೈ ರಾಮ್‌ ಠಾಕೂರ್‌ ಸಕಾರಾತ್ಮಕ ಸ್ಪಂದನೆ ನೀಡಿದ್ದರು.

Comments are closed.