ರಾಷ್ಟ್ರೀಯ

ದಂಪತಿ ಮಧ್ಯೆ ಜಗಳಕ್ಕೆ ಕಾರಣವಾದ ಗೂಗಲ್ ಮ್ಯಾಪ್..!

Pinterest LinkedIn Tumblr


ನಾಗಪಟ್ಟಿನಂ (ತಮಿಳುನಾಡು): ಕಿರಾಣಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬ ಇದೀಗ ಗೂಗಲ್‌ ಮ್ಯಾಪ್‌ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಆತನ ಪ್ರಕಾರ, ಗೂಗಲ್ ಮ್ಯಾಪ್ ಆತನ ಸಾಂಸಾರಿಕ ಜೀವನವನ್ನೇ ಹಾಳು ಮಾಡುತ್ತಿದೆಯಂತೆ..!

ನಾಗಪಟ್ಟಿನಂ ಜಿಲ್ಲೆಯ ಮೈಲಿಯದುತ್ತುರೈ ಎಂಬ ಗ್ರಾಮದ ನಿವಾಸಿಯಾಗಿರುವ ಚಂದ್ರಶೇಖರನ್ ಎಂಬುವರೇ ಗೂಗಲ್ ಮ್ಯಾಪ್ ವಿರುದ್ಧ ದೂರು ನೀಡಿರುವ ವ್ಯಕ್ತಿ. ಇವರ ಮೊಬೈಲ್‌ನಲ್ಲಿ ಇರುವ ಗೂಗಲ್ ಮ್ಯಾಪ್‌ ಆಪ್‌ನಲ್ಲಿ ಇವರು ಇರುವ ಸ್ಥಳವನ್ನು ತಪ್ಪಾಗಿ ತೋರಿಸುತ್ತಿದೆಯಂತೆ. ಹೀಗಾಗಿ, ಇವರ ಪತ್ನಿ ಜಗಳ ಆಡುತ್ತಿದ್ದಾರಂತೆ..!

ಗೂಗಲ್‌ ಮ್ಯಾಪ್ ಬಳಸಿ ಚಂದ್ರಶೇಖರ್ ಅವರ ಪತ್ನಿ ತಮ್ಮ ಪತಿಯ ಲೊಕೇಷನ್ ಪತ್ತೆ ಮಾಡುತ್ತಾರಂತೆ. ಈ ವೇಳೆ ಚಂದ್ರಶೇಖರ್ ಭೇಟಿ ನೀಡದೆ ಇರುವ ಜಾಗಗಳಲ್ಲೂ ಗೂಗಲ್ ಮ್ಯಾಪ್ ಲೊಕೇಷನ್ ತೋರಿಸುತ್ತಿದೆಯಂತೆ. ಮೇ 20ರಂದು ಅವರ ಪತ್ನಿ ಒಂದು ಸ್ಥಳಕ್ಕೆ ಹೋಗಲು ಹೇಳಿದರಂತೆ. ಆದ್ರೆ ಗೂಗಲ್ ಮ್ಯಾಪ್‌ನಲ್ಲಿ ಟ್ರಾಕ್‌ ಮಾಡಿದಾಗ ಚಂದ್ರಶೇಖರ್ ಬೇರೆಡೆ ಹೋಗಿದ್ದು ಕಂಡು ಬಂದಿದೆ.

ತಂತ್ರಜ್ಞಾನವನ್ನು ನಂಬಿದ ಚಂದ್ರಶೇಖರ್ ಅವರ ಪತ್ನಿ, ತನ್ನ ಪತಿಯನ್ನೇ ನಂಬುತ್ತಿಲ್ಲ. ಗೂಗಲ್‌ ಮ್ಯಾಪನ್ನೇ ದಾಖಲೆಯಾಗಿ ತೋರಿಸಿ ಗಂಡನಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ಮನನೊಂದಿರುವ ಚಂದ್ರಶೇಖರ್, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಂಗಡಿ ಇಟ್ಟುಕೊಂಡಿರುವ ಚಂದ್ರಶೇಖರ್ ಎಂಬುವರು ಸ್ಥಳೀಯ ಬಿಜೆಪಿ ಕಾರ್ಯಕರ್ತರಾಗಿದ್ದು, ಅವರ ದೂರನ್ನು ಸ್ವೀಕರಿಸಿದ್ದೇವೆ ಎಂದು ತಿಳಿಸಿರುವ ಪೊಲೀಸರು, ಈವರೆಗೆ ಯಾವುದೇ ಎಫ್‌ಐಆರ್‌ ದಾಖಲಿಸಿಲ್ಲ.

Comments are closed.