ರಾಷ್ಟ್ರೀಯ

ಕೊರೋನಾ: ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ವಕೀಲರು ಕೋಟ್, ಗೌನ್ ಧರಿಸುವಂತಿಲ್ಲ

Pinterest LinkedIn Tumblr


ನವದೆಹಲಿ: ಕೊರೋನಾ ವೈರಸ್ ಇರುವ ಈ ಸಮಯದಲ್ಲಿ ನ್ಯಾಯಾಧೀಶರು ಕೋಟ್ ಮತ್ತು ಗೌನ್ ಧರಿಸದೆ ಬಿಳಿ ಶರ್ಟ್, ಪ್ಯಾಂಟ್ ಚೂಡಿದಾರ, ಸೀರೆ ತೊಟ್ಟು ಕುತ್ತಿಗೆಗೆ ಬಿಳಿ ನೆಕ್ ಬ್ಯಾಂಡ್ ಹಾಕಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಹೇಳಿದ್ದಾರೆ.

ನಿನ್ನೆ ಈ ಸಂಬಂಧ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಎಸ್ ಕಲ್ಗೌಂಕರ್ ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ, ಕೊರೋನಾ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಅಡ್ವೊಕೇಟ್ ಗಳು ಬಿಳಿ ಶರ್ಟ್, ಸಲ್ವಾರ್ ಕಮೀಜ್ , ಬಿಳಿ ಸೀರೆ, ಕುತ್ತಿಗೆಗೆ ನೆಕ್ ಬ್ಯಾಂಡ್ ಧರಿಸಬಹುದು. ಮುಂದಿನ ಆದೇಶ ಬರುವವರೆಗೆ ಇದು ಜಾರಿಯಲ್ಲಿರುತ್ತದೆ ಎಂದು ಸುತ್ತೋಲೆ ಹೇಳಿದೆ.

ಈ ಕುರಿತು ಹೇಳಿಕೆ ಹೊರಡಿಸಿರುವ ಮುಖ್ಯ ನ್ಯಾಯಾಧೀಶರು, ವಕೀಲರು ಮತ್ತು ನ್ಯಾಯಾಧೀಶರಿಗೆ ಸದ್ಯದಲ್ಲಿಯೇ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು. ಅವರು ನಿನ್ನೆ ನ್ಯಾಯಾಧೀಶರಾದ ಇಂದು ಮಲ್ಹೊತ್ರ ಮತ್ತು ಹೃಶಿಕೇಶ್ ರಾಯ್ ಅವರ ಜೊತೆ ವೇದಿಕೆ ಹಂಚಿಕೊಂಡು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ್ದರು. ಈ ವೇಳೆ ನ್ಯಾಯಾಧೀಶರು ಯಾರೂ ಗೌನ್ ಮತ್ತು ಕೋಟ್ ತೊಟ್ಟರಲಿಲ್ಲ.

Comments are closed.