ಅಂತರಾಷ್ಟ್ರೀಯ

1000ಕ್ಕೂ ಹೆಚ್ಚು ಅಮೆರಿಕಾ ಕಂಪನಿಗಳಿಗೆ ಭಾರತ ಗಾಳ

Pinterest LinkedIn Tumblr


ಹೊಸದಿಲ್ಲಿ: ಚೀನಾದಿಂದ ವಲಸೆ ಹೋಗಲು ನಿರ್ಧರಿಸಿರುವ 1000ಕ್ಕೂ ಹೆಚ್ಚು ಅಮೆರಿಕನ್‌ ಕಂಪನಿಗಳನ್ನು ಆಕರ್ಷಿಸಲು ಭಾರತ ಸಜ್ಜಾಗಿದೆ.

ಕೊರೊನಾ ವೈರಸ್‌ ಹಬ್ಬಲು ಚೀನಾವೇ ಕಾರಣ ಎಂದು ಕಿಡಿ ಕಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾದಲ್ಲಿರುವ ಅಮೆರಿಕನ್‌ ಕಂಪನಿಗಳಿಗೆ ದೇಶ ತೊರೆಯುವಂತೆ ಕರೆ ನೀಡಿದ್ದಾರೆ.

ಈ ನಡುವೆ ಭಾರತ ಸರಕಾರ 1000ಕ್ಕೂ ಹೆಚ್ಚು ಅಮೆರಿಕನ್‌ ಕಂಪನಿಗಳನ್ನು ಸಂಪರ್ಕಿಸಿದ್ದು, ಭಾರತದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದೆ. ವೈದ್ಯಕೀಯ ಸಾಧನಗಳನ್ನು ಉತ್ಪಾದಿಸುವ ಕಂಪನಿಗಳು, ಆಹಾರ ಸಂಸ್ಕರಣೆ ಘಟಕಗಳು, ಜವಳಿ, ಚರ್ಮದ ಉತ್ಪನ್ನಗಳು, ಆಟೊಮೊಬೈಲ್‌ ಮತ್ತಿತರ ವಲಯದ ಕಂಪನಿಗಳ ಜತೆ ಒಂದು ಸುತ್ತಿನ ಚರ್ಚೆ ನಡೆಸಲಾಗಿದೆ.

ಹರಿಯಾಣ, ಗುಜರಾತ್‌, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳೂ ಅಮೆರಿಕನ್‌ ಕಂಪನಿಗಳನ್ನು ಆಕರ್ಷಿಸಲು ಸಿದ್ಧತೆ ನಡೆಸುತ್ತಿವೆ. ಹರಿಯಾಣದ ಹಿರಿಯ ಸರಕಾರಿ ಅಧಿಕಾರಿಗಳು ವೆಬಿನಾರ್‌ ಮೂಲಕ ಹೂಡಿಕೆದಾರರನ್ನು ಸಂಪರ್ಕಿಸುತ್ತಿದ್ದಾರೆ. ಅಮೆರಿಕ, ಜಪಾನ್‌, ಕೊರಿಯಾ ಮತ್ತು ಯೂರೋಪ್‌ನ ಕಂಪನಿಗಳು ಚೀನಾದಿಂದ ಬೇರೆ ದೇಶಗಳಿಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ.

Comments are closed.