ರಾಷ್ಟ್ರೀಯ

ಕೆಟ್ಟ ಹಂತ ದಾಟಿದ್ದೇವೆ, ಇನ್ನೂ ಸಂಪೂರ್ಣವಾಗಿ ಕೊರೋನಾ ಮುಕ್ತವಾಗಿಲ್ಲ: ಜಾವ್ಡೇಕರ್

Pinterest LinkedIn Tumblr


ನವದೆಹಲಿ: ಸಾಂಕ್ರಾಮಿಕ ಪಿಡುಗಾದ ಕೋವಿಡ್ 19 ನ ಕೆಟ್ಟ ಹಂತವನ್ನು ಭಾರತ ದಾಟಿದೆ, ಹೀಗಿದ್ದರೂ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಕೆಟ್ಟ ಹಂತ ದಾಟಿದ್ದೇವೆ, ಆದರೆ ಇನ್ನೂ ಸಂಪೂರ್ಣವಾಗಿ ಕೊರೋನಾ ಮುಕ್ತವಾಗಿಲ್ಲ, ಲಾಕ್ ಡೌನ್ ನಿಂದಾಗಿ ಬೇರೆ ದೇಶಗಳಿಗಿಂತ ಭಾರತದ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ ಎಂದು ಹೇಳಿದ್ದಾರೆ.

ಸದ್ಯ ಮೂರನೇ ಹಂತದ ಲಾಕ್ ಡೌನ್ ನಲ್ಲಿದ್ದೇವೆ, ಲಾಕ್ ಡೌನ್ ನಿಂದಾಗಿ ಕೊರೋನಾ ಹರಡುವ ಪ್ರಮಾಣ ಕಡಿಮೆಯಾಗುತ್ತದೆ, ಹೀಗಾಗಿ ಮತ್ತೆ 2 ವಾರಗಳ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.

“ಈ ಸೋಂಕು ಚೀನಾದಿಂದ ಬಂದಿದೆ. ಆದರೆ ಇನ್ನೂ ಲಸಿಕೆ ಲಭ್ಯವಾಗಿಲ್ಲ. ಹಾಗಾಗಿ ಕೋವಿಡ್ 19ನೊಂದಿಗೆ ವಿಭಿನ್ನವಾಗಿ ಬದುಕಬೇಕಿದೆ. ಮುಖಕ್ಕೆ ಮಾಸ್ಕ್ ಧರಿಸುವುದು, ಪದೇ ಪದೆ ಕೈ ತೊಳೆಯುವುದು, ಸಾಮಾಜಿಕ ಅಂತರ ಪಾಲಿಸಬೇಕಿದೆ. ಕಳೆದ 40 ದಿನಗಳ ಲಾಕ್‌ಡೌನ್‌ನಲ್ಲಿ ಸಮಾಜವು ಈ ಬಗ್ಗೆ ಚೆನ್ನಾಗಿ ಕಲಿತುಕೊಂಡಿದೆ” ಎಂದವರು ಹೇಳಿದರು.

Comments are closed.