ರಾಷ್ಟ್ರೀಯ

ದಿನಸಿ ತರುತ್ತೇನೆ ಎಂದು ಹೋಗಿ ಹೊಸ ಹೆಂಡತಿಯ ಜೊತೆ ಪ್ರತ್ಯಕ್ಷ

Pinterest LinkedIn Tumblr


ಗಾಜಿಯಾಬಾದ್‌ (ಉತ್ತರ ಪ್ರದೇಶ): ಲಾಕ್‌ಡೌನ್‌ ಏನೆಲ್ಲಾ ವಿಚಿತ್ರಗಳಿಗೆ ಸಾಕ್ಷಿಯಾಗಿದೆ ಎಂಬುದು ನಿಮಗೆಲ್ಲಾ ಗೊತ್ತೆ ಇದೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಉತ್ತರಪ್ರದೇಶದಲ್ಲಿ ಸ್ವಾರಸ್ಯಕರ ಘಟನೆಯೊಂದು ನಡೆದಿದೆ. ದಿನಸಿ ತರಲು ಮನೆಯಿಂದ ಹೊರಹೋದ ವ್ಯಕ್ತಿ ವಾಪಸ್‌ ಮನೆಗೆ ಬರುವಾಗ ಹೊಸ ಹೆಂಡತಿಯೊಂದಿಗೆ ಮರಳಿರುವ ಘಟನೆ ಗಾಜಿಯಾಬಾದ್‌ನಲ್ಲಿ ವರದಿಯಾಗಿದೆ.

ಹೌದು, ದಿನಸಿ ಸಾಮಗ್ರಿ ತರಲು ಮನೆಯಿಂದ ಹೊರಹೋದ ವ್ಯಕ್ತಿ ರಹಸ್ಯವಾಗಿ ಮದುವೆ ಮಾಡಿಕೊಂಡು ಹೆಂಡತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ, ಆತನ ತಾಯಿ ವಧುವನ್ನು ಮನೆಗೆ ಸೇರಿಸದೆ ಪೊಲೀಸರತ್ತಿರ ದೂರು ತಗೊಂಡು ಹೋಗಿದ್ದಾಳೆ. ಗಾಜಿಯಾಬಾದ್‌ನ ಸಾಹಿಬಾಬಾಡ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ನಾನು ನನ್ನ ಮಗನನ್ನು ದಿನಸಿ ಸಾಮಗ್ರಿ ತರಲು ಅಂಗಡಿಗೆ ಕಳುಹಿಸಿದ್ದೆ. ಆದರೆ, ಆತ ವಾಪಸ್‌ ಬರುವಾಗ ಹೆಂಡತಿಯೊಂದಿಗೆ ಬಂದಿದ್ದಾನೆ. ನಾನು ಈ ಮದುವೆಯನ್ನು ಒಪ್ಪಲ್ಲ ಎಂದು ಪೊಲೀಸರ ಮುಂದೆ ತಾಯಿ ಹೇಳುವಾಗ ಅವರ ಕಣ್ಣು ತೇವವಾಗಿತ್ತು.

ಆದರೆ, ಈ ಮದುವೆ ಎರಡು ತಿಂಗಳ ಹಿಂದೆಯೇ ಹರ್ದ್ವಾರದ ಆರ್ಯ ಸಮಾಜ್‌ ಮಂದೀರದಲ್ಲಿ ನಡೆದಿದ್ದು, ವಿವಾಹ ನೋಂದಣಿ ಪ್ರಮಾಣ ಪತ್ರವನ್ನು ಲಾಕ್‌ಡೌನ್‌ ಮುಗಿದ ಮೇಲೆ ಪಡೆಯುವುದಕ್ಕೆ ವಧು-ವರರು ನಿರ್ಧರಿಸಿದ್ದರು. ಸಾಕ್ಷಿಗಳ ಕೊರತೆಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ಪಡೆಯಲು ನಮಗೆ ಸಾಧ್ಯವಾಗಿಲ್ಲ. ಆಮೇಲೆ ವಾಪಸ್‌ ಹರ್ದ್ವಾರಗೆ ಹೋಗಬೇಕೆಂದರೆ ಲಾಕ್‌ಡೌನ್‌ನಿಂದ ಆಗಿದ್ದಿಲ್ಲ ಎಂದು 26 ವರ್ಷದ ಗದ್ದು ಹೇಳಿದ್ದಾರೆ.

ಲಾಕ್‌ಡೌನ್‌ ಪರಿಸ್ಥಿತಿಯಿಂದಾಗಿ ಗದ್ದು ಆತನ ಪತ್ನಿಯನ್ನು ಮನೆಗೆ ಕರೆದುಕೊಂಡು ಬರುವಂತಾಗಿದೆ. ಆತನ ಪತ್ನಿ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಆದರೆ, ಮನೆ ಮಾಲೀಕ ಮನೆ ಖಾಲಿ ಮಾಡುವಂತೆ ಹೇಳಿದ್ದರಿಂದ ವ್ಯಕ್ತಿ ಮನೆಗೆ ಪತ್ನಿಯನ್ನು ಕರೆದುಕೊಂಡು ಬರಲು ತೀರ್ಮಾನಿಸಿದ್ದ.

ಲಾಕ್‌ಡೌನ್‌ನಿಂದ ಬಾಡಿಗೆ ಮನೆಯಿಂದ ಅವಳನ್ನು ಖಾಲಿ ಮಾಡಿಸಲಾಗಿದೆ. ಅದಕ್ಕಾಗಿ ನಮ್ಮ ತಾಯಿ ಮನೆಗೆ ಅವಳನ್ನು ಕರೆದುಕೊಂಡು ಬರಲು ಇಂದು ತೀರ್ಮಾನಿಸಿದೆ ಎಂದು ಗದ್ದು ಹೇಳಿದ್ದಾರೆ. ಈಗ ಸಾಹಿಬಾಬದ್‌ ಪೊಲೀಸರು ಸವಿತಾ ಮನೆ ಮಾಲೀಕರಿಗೆ ಅವರನ್ನು ಅದೇ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡುವಂತೆ ಹೇಳಿದ್ದಾರೆ.

Comments are closed.