ರಾಷ್ಟ್ರೀಯ

24 ಗಂಟೆಗಳಲ್ಲಿ 49 ಮಂದಿಯನ್ನು ಬಲಿಪಡೆದ ಕೊರೋನಾ ವೈರಸ್; ಸೋಂಕಿತರ ಸಂಖ್ಯೆ 26,496ಕ್ಕೆ ಏರಿಕೆ

Pinterest LinkedIn Tumblr

ನವದೆಹಲಿ; ದೇಶದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, 24 ಗಂಟೆಗಳಲ್ಲಿ 49 ಮಂದಿಯನ್ನು ಬಲಿಪಡೆದುಕೊಂಡಿದೆ. ಅಲ್ಲದೆ, ಸೋಂಕಿತರ ಸಂಖ್ಯೆ 26,496ಕ್ಕೆ ಏರಿಕೆಯಾಗಿದೆ.

ಶನಿವಾರ ಒಂದೇ ದಿನ 1,990 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 26, 496ಕ್ಕೆ ಏರಿಕೆಯಾಗಿದೆ. ಅಲ್ಲದೆ, ಸಾವಿನ ಸಂಕ್ಯೆ 824ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ವರದಿಗಳ ಪ್ರಕಾರ ದೇಶದ 27 ಜಿಲ್ಲೆಗಳಲ್ಲಿ ಶೇ.68 ರಷ್ಟು ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಜಿಲ್ಲಾಮಟ್ಟದಲ್ಲಿ ಹರಡುತ್ತಿರುವ ಈ ವೈರಸ್ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಹರಡುತ್ತಿದೆ.

ಮಹಾರಾಷ್ಟ್ರ, ದೆಹಲಿ, ಗುಜರಾತ್, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ದೇಶದ ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಮಹಾರಾಷ್ಟ್ರ ಒಂದು ರಾಜ್ಯದಲ್ಲಿಯೇ ಶೇ.13.8 ರಷ್ಟು ಸೋಂಕಿತ ಪ್ರಕರಣಗಳು ಕಂಡು ಬಂದಿದೆ. ಇದರಲ್ಲಿ ಮುಂಬೈ ನಗರದಲ್ಲಿಯೇ ಶೇ.47.6 ರಷ್ಟು ಪ್ರಕರಣಗ ಬೆಳಕಿಗೆ ಬಂದಿದೆ.

ಗುಜರಾತ್ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಅಹಮದಾಬಾದ್’ ನಲ್ಲಿ ಶೇ.62ರಷ್ಟು ಪ್ರಕರಣ ಬೆಳಕಿಗೆ ಬಂದಿದೆ.

Comments are closed.